ಸೆಲೂನ್ನಲ್ಲಿ ಕುಸಿದು ಬಿದ್ದು ಮೃತ್ಯು
ಮಲ್ಪೆ, ಜೂ.29: ಶೇವಿಂಗ್ ಮಾಡಲು ಸೆಲೂನ್ನಲ್ಲಿ ಕುಳಿತಿದ್ದ ವ್ಯಕ್ತಿ ಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಜೂ.29ರಂದು ಬೆಳಗ್ಗೆ ಮಲ್ಪೆಯಲ್ಲಿ ನಡೆದಿದೆ.
ಮೃತರನ್ನು ಮಲ್ಪೆ ಬಾಪುತೋಟ ನಿವಾಸಿ ಕರುಣಾಕರ ಅಮೀನ್(46) ಎಂದು ಗುರುತಿಸಲಾಗಿದೆ. ಮಲ್ಪೆಯಲ್ಲಿ ಬೋಟ್ ಮೆಕ್ಯಾನಿಕ್ ಕೆಲಸ ಮಾಡಿ ಕೊಂಡಿದ್ದ ಇವರು, ಅಧಿಕ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದರು. ಮಲ್ಪೆಯ ಸೆಲೂನ್ಗೆ ಶೇವಿಂಗ್ ಮಾಡಲು ಹೋಗಿದ್ದ ಕರುಣಾಕರ ಅಮೀನ್ ಕುಳಿತಲ್ಲಿಯೇ ಕುಸಿದು ಬಿದ್ದರೆನ್ನಲಾಗಿದೆ. ತೀವ್ರ ಅಸ್ವಸ್ಥರಾಗಿದ್ದ ಇವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story