Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಉಳ್ಳವರ ಪಾಲಾಗಲಿರುವ ರೈತರ ಭೂಮಿ

ಉಳ್ಳವರ ಪಾಲಾಗಲಿರುವ ರೈತರ ಭೂಮಿ

ವಾರ್ತಾಭಾರತಿವಾರ್ತಾಭಾರತಿ1 July 2020 10:27 AM IST
share
ಉಳ್ಳವರ ಪಾಲಾಗಲಿರುವ ರೈತರ ಭೂಮಿ

  ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಬಿಜೆಪಿ ಸರಕಾರದ ಸುಗ್ರೀವಾಜ್ಞೆ ರೈತಾಪಿ ಸಮುದಾಯದಲ್ಲಿ ಆಕ್ರೋಶದ ಅಲೆಯನ್ನ್ನೆಬ್ಬಿಸಿದೆ.ಇದರ ಬಗ್ಗೆ ಪರ_ ವಿರೋಧ ಚರ್ಚೆಗಳು ಆರಂಭವಾಗಿವೆ. ಇನ್ನು ಮುಂದೆ ರೈತರಲ್ಲದವರು ಯಾವ ಅಡ್ಡಿ ಆತಂಕಗಳಿಲ್ಲದೆ ಭೂಮಿಯನ್ನು ಖರೀದಿಸಬಹುದಾಗಿದೆ.ಕೊರೋನದಿಂದ ಇಡೀ ದೇಶವೇ ತತ್ತರಿಸಿಹೋಗಿರುವಾಗ, ಜನ ಕಂಗಾಲಾಗಿರುವಾಗ . ಶಾಸನ ಸಭೆಯಲ್ಲಿ ಯಾವ ಚರ್ಚೆಯನ್ನೂ ಮಾಡದೆ ಭೂ ಸುಧಾರಣಾ ಕಾಯ್ದೆಗೆ ಇಂತಹ ಮಹತ್ವದ ತಿದ್ದುಪಡಿಯನ್ನು ತಂದಿರುವುದು ಸಹಜವಾಗಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.ಸರಕಾರ ಏನೇ ಸಮರ್ಥಿಸಿಕೊಳ್ಳಲಿ ಇದು ಕಾರ್ಪೊರೇಟ್ ಕೃಷಿಗೆ ಅವಕಾಶ ಮಾಡಿಕೊಡುವ ತಿದ್ದುಪಡಿ ಎಂದು ರೈತ ನಾಯಕರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲದಿಲ್ಲ.

ಗ್ಯಾಟ್ ಒಪ್ಪಂದಕ್ಕೆ ಭಾರತ ಸಹಿ ಹಾಕಿದಾಗಿನಿಂದ ರೈತ ಪರವಾದ ಭೂಸುಧಾರಣಾ ಶಾಸನದ ಮೇಲೆ ಕತ್ತಿ ತೂಗಾಡುತ್ತಲೇ ಬಂದಿದೆ. ಭಾರತದಲ್ಲಿನ ಭೂಮಿಗೆ ಸಂಬಂಧಿಸಿದ ಶಾಸನಗಳು ಬಹಳ ಕಠಿಣವಾಗಿವೆ. ದೇಶ ಅಭಿವೃದ್ಧಿ ಯತ್ತ ಸಾಗಬೇಕಾದರೆ ಈ ಕಾನೂನುಗಳಲ್ಲಿ ಮಾರ್ಪಾಡು ಆಗಬೇಕು ಎಂದು ವಿಶ್ವ ಬ್ಯಾಂಕ್ ಒತ್ತಡ ಹೇರುತ್ತಲೇ ಬಂದಿದೆ.ಅದರ ದೃಷ್ಟಿಯಲ್ಲಿ ಸುಧಾರಣೆ ಅಂದರೆ ಭೂಮಿಯ ಒಡೆತನದ ಸ್ವರೂಪ ಬದಲಾಗಬೇಕಾಗಿದೆ. ಉಳುವವನೇ ಹೊಲದೊಡೆಯ ಎಂಬುದು ಹೋಗಿ ಉಳ್ಳವರು ಜಮೀನಿನ ಮಾಲಕರಾಗಬೇಕಾಗಿದೆ.

 ಭೂ ಸುಧಾರಣಾ ಕಾನೂನಿನಲ್ಲಿ ಲೋಪಗಳಿದ್ದರೆ ಅದನ್ನು ಸರಿಪಡಿಸಲು ಅವಕಾಶಗಳಿವೆ. ಅದನ್ನು ಬಿಟ್ಟು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ಆತುರವೇನಿತ್ತು? ಭೂ ಸುಧಾರಣಾ ಕಾಯ್ದೆಯನ್ನು ಸರಳೀಕರಣಗೊಳಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿರಬಹುದು,ಆದರೆ ಅದನ್ನೇ ನೆಪ ಮಾಡಿಕೊಂಡು ರೈತರ ಭೂಮಿಯನ್ನು ಕಿತ್ತುಕೊಂಡು ಉಳ್ಳವರಿಗೆ ಕೊಡುವುದ ಸರಿಯಲ್ಲ.ಕೈಗಾರಿಕೆಗಳಿಗೆ ಭೂಮಿ ಬೇಕಿದ್ದರೆ ಈಗಲೂ ಕೊಡಲು ಅವಕಾಶಗಳಿವೆ. ಕೆಐಎಡಿಬಿ ಭೂ ಪರಿವರ್ತನೆ ಮಾಡಿ ಉದ್ಯಮಿಗಳಿಗೆ ಕೊಡಬಹುದಾಗಿದೆ.ವಸತಿ ನಿರ್ಮಾಣಕ್ಕೆ ಗೃಹ ಮಂಡಳಿ ಮತ್ತು ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರಗಳ ಮೂಲಕ ಭೂಮಿ ಪರಭಾರೆ ಮಾಡಬಹುದಾಗಿದೆ.ಅದನ್ನೆಲ್ಲ ಬಿಟ್ಟು ಭೂ ಸುಧಾರಣಾ ಶಾಸನಕ್ಕೆ ತಿದ್ದುಪಡಿ ತಂದಿರುವ ಹಿಂದಿನ ಉದ್ದೇಶಗಳೇನು? ಇದರಿಂದ ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಅನುಕೂಲವಾಗುತ್ತದೆ ಎಂಬ ವಾದಗಳು ಇವೆ.ಅಷ್ಟೇ ಅಲ್ಲ ಇದು ಕಾರ್ಪೊರೇಟ್ ಒಕ್ಕಲುತನವನ್ನು ಜಾರಿಗೆ ತಂದು ಮಣ್ಣಿನ ಮಗನನ್ನು ಆತನ ಭೂಮಿಯಿಂದಲೇ ಹೊರದಬ್ಬುವ ಹುನ್ನಾರವಾಗಿದೆ ಎಂಬ ಟೀಕೆಗೆ ಸರಕಾರ ಸಮರ್ಪಕ ಉತ್ತರವನ್ನು ನೀಡಿಲ್ಲ.

   ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಂವಿಧಾನ ರಚನಾ ಸಭೆಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.ಭೂಮಿ ಎಂಬುದು ವ್ಯಕ್ತಿಯ ಒಡೆತನದಲ್ಲಿರಬಾರದೆಂದು ಸಭೆಯಲ್ಲಿ ಬಲವಾಗಿ ಪ್ರತಿಪಾದಿಸಿದ ರಾಜ್ಯಾಂಗ ರಚನಾ ಸಮಿತಿಯ ಅಧ್ಯಕ್ಷ ಡಾ.ಬಿ.ಆರ್ ಅಂಬೇಡ್ಕರ್ ಯಾರೂ ಭೂಮಿಯ ಮಾಲಕತ್ವವನ್ನು ಹೊಂದಿರಬಾರದು, ಕೃಷಿಯ ಉದ್ದೇಶಕ್ಕಾಗಿ ಎಲ್ಲರಿಗೂ ಭೂಮಿಯನ್ನು ಹಂಚಿಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು.ಆದರೆ ಅಂಬೇಡ್ಕರ್ ಆಶಯದ ಶಾಸನವನ್ನು ಆಗ ತರಲಾಗದಿದ್ದರೂ ಭೂ ಸುಧಾರಣಾ ಕಾಯ್ದೆಗಳನ್ನು ನಮ್ಮ ಸಂವಿಧಾನ ಪೀಠಿಕೆಯಲ್ಲಿ ಹೇಳಲಾಗಿರುವ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಪರಿಗಣಿಸಬೇಕು ಎಂಬುದನ್ನು ಸರ್ವಸಮ್ಮತವಾಗಿ ಒಪ್ಪಿಕೊಂಡ ನಂತರ ನ್ಯಾಯಾಲಯಗಳು ಅದೇ ದಿಕ್ಕಿನಲ್ಲಿ ತೀರ್ಪುಗಳನ್ನು ನೀಡಿ ನಂತರ ಭೂ ಸುಧಾರಣಾ ಕಾಯ್ದೆಗಳು ಸುರಕ್ಷಿತವಾಗಿ ಉಳಿದುಕೊಂಡು ಬಂದವು.ಆಗಾಗ ರೈತರು ಇದಕ್ಕಾಗಿ ಹೋರಾಡುತ್ತಲೂ ಬಂದರೆಂಬುದು ಗಮನಾರ್ಹ.

 ಜಾಗತೀಕರಣ ಮತ್ತು ನವ ಉದಾರೀಕರಣ ಆರ್ಥಿಕ ನೀತಿಗಳನ್ನು ಅಂಗೀಕರಿಸಿದ ನಂತರ ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿ ಇರುವುದು ನಿಜ.ಒಕ್ಕಲುತನಕ್ಕೆ ಹಾಕಿದ ಬಂಡವಾಳ ವಾಪಸ್ ಬರುತ್ತಿಲ್ಲ,ರೈತರು ನಗರಗಳಿಗೆ ವಲಸೆ ಬರುತ್ತಿದ್ದಾರೆ. ತಮ್ಮ ಫಸಲುಗಳಿಗೆ ನ್ಯಾಯ ಬೆಲೆ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಸುಳ್ಳಲ್ಲ.ಆದರೆ ಈ ಸಮಸ್ಯೆಗಳಿಗೆ ಸರಕಾರ ಪರಿಹಾರವನ್ನು ಕಂಡು ಹಿಡಿಯಬೇಕು.ರೈತರು ಬೆಳೆದ ಬೆಳೆಗೆ ನ್ಯಾಯ ಬೆಲೆ ಸಿಗುವಂತೆ ಮಾಡಬೇಕು.ಹಾಗೆಂದು ಕೃಷಿ ಭೂಮಿಯನ್ನು ಉಳ್ಳವರ ಮಡಿಲಿಗೆ ಹಾಕಿದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಬದಲಿಗೆ ಆಹಾರ ಉತ್ಪಾದನೆ ಪ್ರಮಾಣ ತೀವ್ರವಾಗಿ ಕುಸಿಯುತ್ತದೆ.ಆಹಾರ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಕಳೆದುಕೊಳ್ಳುವ ಅಪಾಯವಿದೆ.

 ಭೂ ಸುಧಾರಣಾ ಕಾಯ್ದೆಗೆ ತಂದಿರುವ ಈ ತಿದ್ದುಪಡಿ ರೈತಾಪಿ ಸಮುದಾಯದ ಬದುಕನ್ನೇ ನಾಶ ಮಾಡಲಿದೆ.ಭೂ ಮಾಫಿಯಾಗಳು ಭೂಮಿಯನ್ನು ಕಬಳಿಸಿ ಕೃಷಿಯೇತರ ಉದ್ದೇಶಗಳಿಗೆ ಬಳಸುವ ಅಪಾಯವಿದೆ.ಪರಿಸರ ಸಮತೋಲನದ ಮೇಲೂ ಇದು ದುಷ್ಪರಿಣಾಮ ಬೀರಲಿದೆ. ಕಾರ್ಪೊರೇಟ್ ಕೃಷಿ ಆರಂಭವಾದರೆ ದೇಶದ ಕೃಷಿ ವಲಯಕ್ಕೆ ಅದು ಕಾಲಕ್ರಮೇಣ ಗಂಡಾಂತರಕಾರಿಯಾಗಲಿದೆ. ಉಳ್ಳವರು ಭೂಮಿಯ ಮಾಲಕರಾಗಿ ಉಳುವವ ತನ್ನದೇ ಜಮೀನಿನಲ್ಲಿ ಜೀತದಾಳುವಿನಂತೆ ದುಡಿಯಬೇಕಾಗುತ್ತದೆ. ರೈತಪರ,ಜನ ಪರ ಸಂಘಟನೆಗಳು ಈ ಬಗ್ಗೆ ಪರಾಮರ್ಶೆ ನಡೆಸಿ ಹೋರಾಟ ರೂಪಿಸುವುದು ಅಗತ್ಯವಾಗಿದೆ.ಸರಕಾರವೂ ಹಠಕ್ಕೆ ಬೀಳದೆ ಈ ಸುಗ್ರೀವಾಜ್ಞೆಯನ್ನು ವಾಪಸ್ ಪಡೆದು ಕೊರೋನ ಬಿಕ್ಕಟ್ಟು ಮುಗಿದ ನಂತರ ಎಲ್ಲ ಪಕ್ಷಗಳು ಹಾಗೂ ರೈತ ಸಂಘಟನೆಗಳ ಜೊತೆ ಸಮಾಲೋಚನೆ ಮಾಡಿ ಒಮ್ಮತ ರೂಪಿಸಲು ಮುಂದಾಗುವುದು ಅಗತ್ಯವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X