ಮಂಗಳೂರು: ಪೈಲೆಟ್ ತರಬೇತಿ ಪಡೆದಿದ್ದ ಯುವಕ ಆತ್ಮಹತ್ಯೆ
ಮಂಗಳೂರು : ನಗರದ ಮರೋಳಿ ನಿವಾಸಿ ಅದ್ವೈತ ಶೆಟ್ಟಿ (32) ಬುಧವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ಪೈಲೆಟ್ ತರಬೇತಿ ಪಡೆದಿದ್ದು, ಕೆಲಸ ಹುಡುಕುತ್ತಿದ್ದರು. 3 ದಿನಗಳ ಹಿಂದೆಯಷ್ಟೆ ಊರಿಗೆ ಬಂದಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story