ಶಿವರಾಜ್ ಸಿಂಗ್ ಚೌಹಾಣ್ ಸಚಿವ ಸಂಪುಟದಲ್ಲಿ ಸಿಂಧಿಯಾ ಬೆಂಬಲಿಗರಿಗೆ 12 ಸ್ಥಾನ

ಭೋಪಾಲ್: ಮಧ್ಯ ಪ್ರದೇಶದಲ್ಲಿ ಹಿಂದಿನ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಉರುಳಿಸಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ವಹಿಸಿಕೊಂಡು ಮೂರು ತಿಂಗಳ ನಂತರ ಇಂದು ಸಚಿವ ಸಂಪುಟ ವಿಸ್ತರಣೆ ನಡೆದು 28 ಮಂದಿ ನೂತನ ಸಚಿವರು ಸೇರ್ಪಡೆಗೊಂಡಿದ್ದಾರೆ.
ಈ 28 ಮಂದಿಯಲ್ಲಿ 12 ಮಂದಿ ಮಾಜಿ ಕಾಂಗ್ರೆಸ್ ನಾಯಕರಿದ್ದು, ಅವರ ಪೈಕಿ ಒಂಬತ್ತು ಮಂದಿ ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಬೆಂಬಲಿಗರು ಎಂಬುದು ವಿಶೇಷವಾಗಿದೆ. ಸಿಂಧಿಯಾ ಸಹಿತ ಈ ಮಾಜಿ ಕಾಂಗ್ರೆಸ್ ನಾಯಕರ ಬಂಡಾಯದಿಂದಲೇ ಕಮಲ್ ನಾಥ್ ಸರಕಾರ ಪತನಗೊಂಡಿತ್ತೆಂಬುದನ್ನು ಇಲ್ಲಿ ಉಲ್ಲೇಖಿಸಬಹುದು. ಈಗಾಗಲೇ ಚೌಹಾಣ್ ಸಚಿವ ಸಂಪುಟದಲ್ಲಿ ಇಬ್ಬರು ಸಿಂಧಿಯಾ ಬೆಂಬಲಿಗರಿದ್ದಾರೆ.
ಕಮಲ್ ನಾಥ್ ಸರಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಒಟ್ಟು 22 ಮಂದಿ ಮಾಜಿ ಕಾಂಗ್ರೆಸ್ ಶಾಸಕರು ಈಗ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಂತಾಗಿದ್ದು ಅವರಲ್ಲಿ 10 ಮಂದಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರೆ ಉಳಿದ ನಾಲ್ಕು ಮಂದಿ ರಾಜ್ಯ ಸಚಿವರಾಗಿದ್ದಾರೆ.





