ಬ್ರಹ್ಮಾವರ ಎಲ್ಐಸಿ ಕಚೇರಿ ಸೀಲ್ಡೌನ್
ಬ್ರಹ್ಮಾವರ, ಜು.2: ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಎಸ್ಎಂಎಸ್ ಕಾಲೇಜು ಎದುರಿಗಿರುವ ಎಲ್ಐಸಿ ಕಚೇರಿಯ ಅಧಿಕಾರಿ ಯೊಬ್ಬರಲ್ಲಿ ಕೊರೋನ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಡೀ ಕಚೇರಿಯನ್ನು ಇಂದು ಅಪರಾಹ್ನ ಸೀಲ್ಡೌನ್ ಮಾಡಲಾಗಿದೆ ಎಂದು ಬ್ರಹ್ಮಾವರದ ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.
ಎಲ್ಐಸಿಯ ಅಭಿವೃದ್ಧಿ ಅಧಿಕಾರಿಯೊಬ್ಬರು ಕೋವಿಡ್ಗೆ ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ಕಚೇರಿಯನ್ನು ಹಾಗೂ ಚಾಂತಾರು ಗ್ರಾಮದಲ್ಲಿ ರುವ ಅವರನ್ನು ಮನೆಯನ್ನು ಸಹ ಸೀಲ್ಡೌನ್ ಮಾಡಲಾಗಿದೆ ಎಂದು ಅವರು ತಿಳಿಸಿದರು. ಕಚೇರಿಯಲ್ಲಿ ಸುಮಾರು 42 ಮಂದಿ ಉದ್ಯೋಗಿ ಗಳಿದ್ದು, ಅವರೆಲ್ಲರೂ ಪರೀಕ್ಷೆಗೊಳಪಡಬೇಕಾಗಿದೆ.
ಕಚೇರಿಯನ್ನು ಮುಚ್ಚಿದ ಬಳಿಕ ಸ್ಯಾನಟೈಸ್ ಮಾಡಲಾಗಿದ್ದು, ಇನ್ನು ಎರಡು ದಿನಗಳ ಕಾಲ ಅದು ಮುಚ್ಚಿರುತ್ತದೆ. ಇನ್ನೆರಡು ಬಾರಿ ಸಂಪೂರ್ಣ ಸ್ಯಾನಟೈಸ್ ಮಾಡಿದ ಬಳಿಕ ಕಚೇರಿಯನ್ನು ಪುನಹ ತೆರೆಯಲಾಗುತ್ತದೆ. ಈ ಮಧ್ಯೆ ಪಾಸಿಟಿವ್ ಬಂದವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಗುರುತಿಸುವ ಕೆಲಸವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಡೆಸಿದ್ದಾರೆ.