ನಿಮ್ಮ ಶೌರ್ಯಕ್ಕೆ ಸರಿಸಾಟಿ ಯಾವುದೂ ಇಲ್ಲ: ಲಡಾಖ್ ನಲ್ಲಿ ಯೋಧರನ್ನುದ್ದೇಶಿಸಿ ಪ್ರಧಾನಿ ಭಾಷಣ

ಹೊಸದಿಲ್ಲಿ: ನಿಮ್ಮ ಶೌರ್ಯ ಮತ್ತು ಸಮರ್ಪಣೆಗೆ ಸರಿಸಾಟಿ ಯಾರೂ ಇಲ್ಲ. ನಿಮ್ಮ ಧೈರ್ಯವು ನೀವು ನೆಲೆಸಿರುವ ಈ ಪರ್ವತ ಶ್ರೇಣಿಗಿಂತ ಎತ್ತರವಾದದ್ದು ಎಂದು ಲಡಾಖ್ ನಲ್ಲಿ ದೇಶದ ಯೋಧರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತ ಮಾತೆಯ ವೈರಿಗಳು ನಿಮ್ಮ ಶೌರ್ಯವನ್ನು ನೋಡಿದ್ದಾರೆ. ನಿಮ್ಮ ಕೈಗಳು ಈ ಪರ್ವತಗಳಿಗಿಂತಲೂ ಬಲಿಷ್ಠವಾದವುಗಳು. ನಿಮ್ಮ ಆತ್ಮವಿಶ್ವಾಸ ಮತ್ತು ನಂಬಿಕೆ ದೃಢವಾದದ್ದು ಎಂದು ಹೇಳಿದರು.
ನೀವು ಸೇವೆ ಸಲ್ಲಿಸುತ್ತಿರುವ ಪ್ರದೇಶವು ವಿಶ್ವದಲ್ಲೇ ಅತ್ಯಂತ ಕಠಿಣ ಪ್ರದೇಶಗಳಲ್ಲೊಂದು. ಭಾರತದ ಸೇನೆಯು ವಿಶ್ವದ ಎಲ್ಲಾ ಸೇನೆಗಳಿಗಿಂತ ಉತ್ತಮವಾದದ್ದು ಎನ್ನುವುದನ್ನು ನೀವು ಮತ್ತೆ ಸಾಬೀತುಪಡಿಸಿದ್ದೀರಿ. ನೀವು ಇಲ್ಲಿ ಏನು ಮಾಡಿದ್ದೀರೋ, ನೀವು ಯಾವ ಸಂದೇಶವನ್ನು ಕಳುಹಿಸಿದ್ದೀರೋ ಅದು ಇಡೀ ವಿಶ್ವಕ್ಕೆ ತಲುಪಿದೆ ಎಂದವರು ಹೇಳಿದರು.
Next Story