ದಿಲ್ಲಿ ಸಮೀಪ ಭೂಕಂಪ
ಹೊಸದಿಲ್ಲಿ,ಜು.3: ರಿಕ್ಟರ್ ಮಾಪಕದಲ್ಲಿ 4.7ರಷ್ಟು ಮಧ್ಯಮ ತೀವ್ರತೆಯ ಭೂಕಂಪ ಶುಕ್ರವಾರ ಸಂಜೆ ಏಳು ಗಂಟೆಯ ಸುಮಾರಿಗೆ ದಿಲ್ಲಿ ಸಮೀಪ ಸಂಭವಿಸಿದ್ದು,ಗಾಬರಿಗೊಂಡ ಜನರು ಮನೆಗಳಿಂದ ಹೊರಗೆ ಓಡುವಂತಾಗಿತ್ತು. ಭೂಕಂಪದಿಂದಾಗಿ ದಿಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಹಲವಾರು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸುತ್ತಲೇ ಇತ್ತು.
ಭೂಕಂಪದ ಕೇಂದ್ರಬಿಂದು ಹರ್ಯಾಣದ ಗುರ್ಗಾಂವ್‌ನ ನೈರುತ್ಯಕ್ಕೆ 60 ಕಿ.ಮೀ.ದೂರದಲ್ಲಿ 35 ಕಿ.ಮೀ.ಆಳದಲ್ಲಿ ಸ್ಥಿತಗೊಂಡಿತ್ತು ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರವು ತಿಳಿಸಿದೆ.
‘ಸ್ವಲ್ಪ ಸಮಯದ ಹಿಂದೆ ದಿಲ್ಲಿಯಲ್ಲಿ ಸೌಮ್ಯ ಭೂಕಂಪದ ಅನುಭವವಾಗಿದೆ. ನೀವೆಲ್ಲರೂ ಕ್ಷೇಮವಾಗಿದ್ದೀರಿ ಎಂದು ಆಶಿಸಿದ್ದೇನೆ ’ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭೂಕಂಪ ಸಂಭವಿಸಿದ ಬೆನ್ನಿಗೇ ಟ್ವೀಟಿಸಿದ್ದರು.
Next Story