ದ.ಕ. ಜಿಲ್ಲೆಯಲ್ಲಿ ಕೊರೋನ ವೈರಸ್ ಗೆ ಮತ್ತೆ ಮೂವರು ಬಲಿ: ಸಾವಿನ ಸಂಖ್ಯೆ 22ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
ಮಂಗಳೂರು, ಜು.4: ದ.ಕ. ಜಿಲ್ಲೆಯಲ್ಲಿ ಕೊರೋನ ವೈರಸ್ ಮರಣ ಮೃದಂಗ ಮುಂದುವರಿದಿದ್ದು, ಸೋಂಕಿನಿಂದ ಇಂದು ಮೂವರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ, ಹೃದಯಾಘಾತದಿಂದ ಮೃತಪಟ್ಟ ಸುಳ್ಯದ ಕೆರೆಮೂಲೆಯ ಮಹಿಳೆಯ ಕೊರೋನ ಪರೀಕ್ಷೆಯ ವರದಿ ನಿನ್ನೆ ರಾತ್ರಿ ಪಾಸಿಟಿವ್ ಬಂದಿದೆ.
ಇಂದು ಮುಂಜಾನೆ ಕೂಳೂರು ಹಾಗೂ ಕೋಡಿಕಲ್ ನ ಇಬ್ಬರು ಕೊರೋನ ಸೋಂಕಿತರು ವೆನ್ಲಾಕ್ ಕೊವೀಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರಲ್ಲಿ ಒಬ್ಬರು ಮಹಿಳೆ ಮತ್ತು ಇನ್ನೊಬ್ಬರು ಪುರುಷ ಸೇರಿದ್ದಾರೆ.
Next Story