ಕಾರು ಢಿಕ್ಕಿಯಾಗಿ ದಿಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೃತ
ಹೊಸದಿಲ್ಲಿ, ಜು.4 ವೇಗವಾಗಿ ಸಾಗಿಬಂದ ಕಾರೊಂದು ಅಮೆರಿಕ ರಾಯಭಾರಿ ಕಚೇರಿಯ ಸಮೀಪ ಗೋಡೆಗೆ ಅಪ್ಪಳಿಸುವ ಮೊದಲು ಅಲ್ಲೇ ಕರ್ತವ್ಯದಲ್ಲಿದ್ದ 51 ವಯಸ್ಸಿನ ದಿಲ್ಲಿ ಪೊಲೀಸ್ ಇಲಾಖೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ನನ್ನು ಬಲಿ ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟಿರುವ ಪೊಲೀಸ್ ಅಧಿಕಾರಿಯನ್ನು ಲಾಲ್ ಮನ್ ಸಿಂಗ್ ಸಿಸೋಡಿಯಾ ಎಂದು ಗುರುತಿಸಲಾಗಿದೆ.. ರಾಜಸ್ಥಾನ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್ 41 ವಯಸ್ಸಿನ ಸಿದ್ದಾರ್ಥ್ ಭಗತ್ ಕಾರನ್ನು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಸಿದ್ದಾರ್ಥ್ರನ್ನು ಬಂಧಿಸಿದ್ದೇವೆ ಎಂದು ರಾಜಸ್ಥಾನ ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Next Story