ಕಾರ್ಗಿಲ್ ನಲ್ಲಿ 4.7 ತೀವ್ರತೆಯ ಭೂಕಂಪ
ಕಾರ್ಗಿಲ್: ಲಡಾಖ್ ಪ್ರದೇಶದ ಕಾರ್ಗಿಲ್ನಲ್ಲಿ ರವಿವಾರ ಮುಂಜಾನೆ 3.37ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.7ರಷ್ಟಿತ್ತು.
ಕಾರ್ಗಿಲ್ನಿಂದ ವಾಯವ್ಯಕ್ಕೆ 433 ಕಿಲೋಮೀಟರ್ ದೂರದಲ್ಲಿ ಕಂಪನ ಸಂಭವಿಸಿದೆ. “ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ಹೊಂದಿದ್ದ ಭೂಕಂಪ ಲಡಾಖ್ನ ಕಾರ್ಗಿಲ್ನಿಂದ 433 ಕಿಲೋಮೀಟರ್ ವಾಯವ್ಯದಲ್ಲಿ ಮುಂಜಾನೆ 3.37ಕ್ಕೆ ಸಂಭವಿಸಿದೆ” ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.
ಕಳೆದ ಗುರುವಾರ ರಿಕ್ಟರ್ ಮಾಪಕದಲ್ಲಿ 4.5ರಷ್ಟು ತೀವ್ರತೆಯ ಭೂಕಂಪ ಲಡಾಖ್ನಲ್ಲಿ ಮಧ್ಯಾಹ್ನ 1.11ಕ್ಕೆ ಸಂಭವಿಸಿತ್ತು.
Next Story