ಕೊರೋನ ವೈರಸ್: ರಷ್ಯಾವನ್ನು ಹಿಂದಿಕ್ಕಿ 3ನೆ ಸ್ಥಾನಕ್ಕೇರಿದ ಭಾರತ

ಹೊಸದಿಲ್ಲಿ: ಕೊರೋನ ವೈರಸ್ ಸೋಂಕಿನಿಂದ ತತ್ತರಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ರಷ್ಯಾವನ್ನು ಹಿಂದಿಕ್ಕಿರುವ ಭಾರತ 3ನೆ ಸ್ಥಾನಕ್ಕೇರಿದೆ. ರವಿವಾರ ಸಂಜೆಯ ವೇಳೆಗೆ ದೇಶದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ 6.9 ಲಕ್ಷಕ್ಕೇರಿದೆ.
ರಷ್ಯಾದಲ್ಲಿ ಕೊರೋನ ಸೋಂಕಿತರ ಸಂಖ್ಯೆ 6.8 ಲಕ್ಷವಾಗಿದೆ. ಭಾರತಕ್ಕಿಂತ ಮುಂದಿರುವ ಬ್ರೆಝಿಲ್ ನಲ್ಲಿ 15 ಲಕ್ಷ ಮತ್ತು ಮೊದಲನೆ ಸ್ಥಾನದಲ್ಲಿರುವ ಅಮೆರಿಕದಲ್ಲಿ 28 ಲಕ್ಷ ಪ್ರಕರಣಗಳು ವರದಿಯಾಗಿವೆ.
ಭಾರತದಲ್ಲಿ ಇಂದು 24 ಗಂಟೆಗಳಲ್ಲಿ 25 ಸಾವಿರ ಪ್ರಕರಣಗಳು ವರದಿಯಾಗಿದ್ದು, 613 ಮಂದಿ ಮೃತಪಟ್ಟಿದ್ದಾರೆ.
Next Story