ಎಂಎಸ್ಇಝೆಡ್ ಎಲ್ ಮೇಲ್ಸೇತುವೆಗೆ ಸ್ಟೀಲ್ ಗಿರ್ಡರ್ ಅಳವಡಿಸುವ ಕಾರ್ಯ ಪೂರ್ಣ
ಮಂಗಳೂರು: ಕೊಂಕಣ ರೈಲ್ವೆ ವತಿಯಿಂದ ಮಂಗಳೂರು ವಿಶೇಷ ಆರ್ಥಿಕ ವಲಯ ಲಿಮಿಟೆಡ್ (ಎಂಎಸ್ಇಝೆಡ್ ಎಲ್) ಮೇಲ್ಸೇತುವೆಗೆ ಸ್ಟೀಲ್ ಗಿರ್ಡರ್ ಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿದೆ.
ಜೋಕಟ್ಟೆ ಗ್ರಾಮದ ಕೊಂಕಣ ರೈಲ್ವೆ ಲೈನ್ ನಲ್ಲಿ ಕೊಂಕಣ ರೈಲ್ವೆಯಿಂದ ಮೇಲ್ಸೇತುವೆ ರಚನೆ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಜುಲೈ 7ರಂದು 45 ಮೀಟರ್ ಉದ್ದದ 4 ಗಿರ್ಡರ್ ಗಳನ್ನು ರೈಲ್ವೆ ಟ್ರಾಫಿಕ್ ನಿಯಂತ್ರಿಸುವ ಮೂಲಕ ಎರಡು ಕ್ರೇನ್ ಗಳನ್ನು ಬಳಸಿ ಅಳವಡಿಸುವ ಕಾರ್ಯ ಯಶಸ್ವಿಯಾಗಿ ನಡೆದಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ವ್ಯವಹಾರಗಳ ವ್ಯವಸ್ಥಾಪಕರಾದ ಕೆ. ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
Next Story