ಕಾರ್‌ಸ್ಟ್ರೀಟ್: ವಿದ್ಯಾರ್ಥಿ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಮಂಗಳೂರು, ಜು.8: ನಗರದ ರಥಬೀದಿಯ ಡಾ.ಪಿ. ದಯಾನಂದ ಪೈ- ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊರೋನ ವೈರಸ್‌ನಿಂದ ಉಂಟಾದ ಸಂಕಷ್ಟದಿಂದ ತೊಂದರೆಗೊಳಗಾದ ಕಾಲೇಜಿನ ವಿದ್ಯಾರ್ಥಿಗಳ ಹೆತ್ತವರಿಗೆ ಇಸ್ಕಾನ್‌ನ ಅಕ್ಷಯ ಪಾತ್ರೆ ವತಿಯಿಂದ 150ಕ್ಕೂ ಹೆಚ್ಚು ಆಹಾರದ ಕಿಟ್ ವಿತರಿಸಲಾಯಿತು.
ಇಸ್ಕಾನ್ ಅಕ್ಷಯ ಪಾತ್ರೆಯ ಉಪಾಧ್ಯಾಕ್ಷ ಸನಂದನಾ ದಾಸ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ದೃತಿಗೆಡದೆ ಕೋವಿಡ್-19 ಸೃಷ್ಟಿಸಿರುವ ಆತಂಕದ ಸಮಯದಲ್ಲಿ ಧನಾತ್ಮಕವಾಗಿ ಆಲೋಚಿಸಬೇಕು. ಆತ್ಮಸ್ಥೈರ್ಯದೊಂದಿಗೆ ಹೊಸ ವಿಷಯ, ತಂತ್ರಜ್ಞಾನ, ಸಂಸ್ಕಾರ ಕಲಿತು ಹೊಸತನಕ್ಕೆ ನಾಂದಿ ಹಾಡಲು ಕರೆ ನೀಡಿದರು. ಕಿಟ್‌ನಲ್ಲಿ ಸುಮಾರು 16 ಬಗೆಯ ಆಹಾರ ಸಾಮಗ್ರಿಗಳಿದ್ದು, ಸಣ್ಣ ಕುಟುಂಬಕ್ಕೆ 12 ದಿನಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಡಾ.ಶಿವರಾಮ ಪಿ., ಕಾಲೇಜಿನ ಬೋಧಕೇತರ ಸಿಬ್ಬಂದಿ ಮತ್ತು ಸ್ವಯಂ ಸೇವಕರಾದ ತುಷಾರ್, ಅಕ್ಷಯ್, ಪ್ರಜ್ವಲ್, ವಿನೋದ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.





