ತೋನ್ಸೆ ಗ್ರಾಪಂ ಆಡಳಿತಾಧಿಕಾರಿಯಿಂದ ಅಧಿಕಾರ ಸ್ವೀಕಾರ
ಉಡುಪಿ, ಜು.8: 31ನೆ ತೋನ್ಸೆ ಗ್ರಾಪಂ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಯಿಂದ ನೇಮಕಗೊಂಡಿರುವ ಮಣಿಪಾಲ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು.
ಗ್ರಾಪಂನ ನಿರ್ಗಮಿತ ಅಧ್ಯಕ್ಷೆ ಫೌಝಿಯಾ ಪರ್ವಿನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಮಲಾ ಗ್ರಾಪಂ ಪರವಾಗಿ ಡಾ.ಪ್ರಶಾಂತ್ ಕುಮಾರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂನ ನಿರ್ಗಮಿತ ಸದಸ್ಯ ಅಶ್ಫಾಕ್ ತೋನ್ಸೆ, ಕಾರ್ಯ ದರ್ಶಿ ದಿನಕರ, ಮಾಜಿ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಮಾಜಿ ಉಪಾಧ್ಯಕ್ಷ ಉಸ್ತಾದ್ ಸಾದಿಕ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
Next Story