ಭಾರತದಲ್ಲಿ ಕೊರೋನ ಸಮುದಾಯಕ್ಕೆ ಹರಡಿಲ್ಲ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್

ಹೊಸದಿಲ್ಲಿ, ಜು.9: ಭಾರತದಲ್ಲಿ ಈ ತನಕ ಕೊರೋನ ವೈರಸ್ ಸೋಂಕು ಸಮುದಾಯ ಮಟ್ಟಕ್ಕೆ ಹರಡಿಲ್ಲ. ಇಂದು ನಮ್ಮ ಚರ್ಚೆ ಸಂದರ್ಭದಲ್ಲಿ ತಜ್ಞರು ಭಾರತದಲ್ಲಿ ಕೊರೋನ ಸಮುದಾಯ ಮಟ್ಟಕ್ಕೆ ಹರಡಿಲ್ಲ ಎಂದು ಮತ್ತೊಮ್ಮೆ ಹೇಳಿದ್ದಾರೆ. ಕೆಲವು ಸ್ಥಳೀಯ ಮಟ್ಟದಲ್ಲಿ ಸಮುದಾಯಕ್ಕೆ ಹರಡಿರಬಹುದು. ಆದರೆ ದೇಶದಲ್ಲಿ ಸಮುದಾಯ ಮಟ್ಟಕ್ಕೆ ಹರಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಗುರುವಾರ ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಪರಿಶೀಲಿಸಲು,ಮೇಲ್ಚಿಚಾರಣೆ ಹಾಗೂ ವೌಲ್ಯಮಾಪನ ಮಾಡಲು ಆರೋಗ್ಯ ಸಚಿವ ಹರ್ಷವರ್ಧನ್ ಇಂದು 18ನೇ ಉನ್ನತ ಮಟ್ಟದ ಸಚಿವರ ಸಭೆಯ ಅಧ್ಯಕ್ಷತೆ ವಹಿಸಿದರು. ಸಭೆಯಲ್ಲಿ ಹಾಲಿ ಪರಿಸ್ಥಿತಿ,ಇತ್ತೀಚೆಗಿನ ಅಂಕಿ-ಅಂಶವನ್ನು ಪ್ರಸ್ತುತಪಡಿಸಲಾಯಿತು. ಭವಿಷ್ಯದ ಕಾರ್ಯತಂತ್ರವನ್ನು ರೂಪಿಸಲಾಯಿತು.
Next Story





