ಪೊಲೀಸ್ ಅಧಿಕಾರಿಯ ಹತ್ಯೆ ಮಾಡಿದ್ದ ವ್ಯಕ್ತಿ 38 ವರ್ಷಗಳ ಬಳಿಕ ಬಂಧನ!
ಬರ್ಮೆರ್, ರಾಜಸ್ಥಾನ, ಜು.11: ಗುಜರಾತ್ನಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರನ್ನು ಗುಂಡಿಟ್ಟು ಸಾಯಿಸಿ ಡಕಾಯಿತಿ ನಡೆಸಿದ ಪ್ರಕರಣದ ಆರೋಪಿಯನ್ನು 38 ವರ್ಷಗಳ ಬಳಿಕ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
66 ವರ್ಷ ವಯಸ್ಸಿನ ಶಕ್ತಿದಾನ್ ಸಿಂಗ್ ಬಂಧಿತ ಆರೋಪಿ. ಈತನನ್ನು ಗುಜರಾತ್ ಪೊಲೀಸರು ಬಿಜವಾಲಾ ಗ್ರಾಮದಿಂದ ಬಂಧಿಸಿದ್ದಾರೆ.
ಗುಜರಾತ್ನ ಬನಸ್ಕಾಂತ ಜಿಲ್ಲೆಯ ಇಕ್ಬಾಲ್ಘರ್ ಪ್ರದೇಶದಲ್ಲಿ ಆರೋಪಿ 1982ರಲ್ಲಿ ಈ ಕೃತ್ಯ ಎಸಗಿದ್ದ. 1980ರ ದಶಕದಲ್ಲಿ ಕುಖ್ಯಾತ ಡಕಾಯಿತನಾಗಿದ್ದ ಸಿಂಗ್ ವಿರುದ್ಧ ರಾಜಸ್ಥಾನದಲ್ಲಿ 40 ಪ್ರಕರಣಗಳು ದಾಖಲಾಗಿದ್ದವು ಎಂದು ಬರ್ಮೆರ್ ಎಸ್ಪಿ ಆನಂದ್ ಶರ್ಮಾ ವಿವರಿಸಿದ್ದಾರೆ.
1989ರಲ್ಲಿ ಈತ ಶರಣಾಗಿದ್ದು, ಸದ್ಯ ರಾಜಸ್ಥಾನದಲ್ಲಿ ಈತನ ವಿರುದ್ಧ ಯಾವುದೇ ಪ್ರಕರಣಗಳು ಬಾಕಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Next Story