ಈ ಮಾಸ್ಕ್ ಬೆಲೆ 4 ಲಕ್ಷ ರೂ.!
ಸೂರತ್,ಜು.11: ಕೊರೊನ ವೈರಸ್ ಹಾವಳಿಯಿಂದಾಗಿ ದೇಶಾದ್ಯಂತ ಮುಖಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.ಸೂರತ್ನ ಜ್ಯುವೆಲ್ಲರಿ ಶಾಪ್ವೊಂದು ಡೈಮಂಡ್ನಿಂದ ಅಲಂಕೃತ ಮಾಸ್ಕ್ಗಳನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದೆ. ಈ ಮಾಸ್ಕ್ಗಳಿಗೆ 1.5 ಲಕ್ಷ ರೂ.ನಿಂದ 4 ಲಕ್ಷ ರೂ. ತನಕ ಬೆಲೆ ಇದೆ.
ನನ್ನ ಅಂಗಡಿಗೆ ಬಂದ ಗ್ರಾಹಕರೊಬ್ಬರು ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದು, ವಧು ಹಾಗೂ ವರನಿಗೆ ಒಂದು ವಿಭಿನ್ನ ಮಾಸ್ಕ್ ತಯಾರಿಸಿಕೊಡಲು ಬೇಡಿಕೆ ಇಟ್ಟರು. ಆ ಬಳಿಕ ನನಗೆ ಈ ಯೋಚನೆ ಬಂತು. ಮಾಸ್ಕ್ನ ಬಟ್ಟೆಯ ವಸ್ತುವನ್ನು ಸರಕಾರದ ಮಾರ್ಗಸೂಚಿಯಂತೆ ರಚಿಸುತ್ತಿದ್ದೇವೆ. ಶುದ್ಧ ಡೈಮಂಡ್ ಹಾಗೂ ಅಮೆರಿಕದ ಡೈಮಂಡ್ನ್ನು ಮಾಸ್ಕ್ ತಯಾರಿಕೆಯಲ್ಲಿ ಬಳಸಿದ್ದೇವೆ ಎಂದು ಜ್ಯುವೆಲ್ಲರಿ ಶಾಪ್ ಮಾಲಕ ದೀಪಕ್ ಚೋಕ್ಸಿ ಹೇಳಿದ್ದಾರೆ.
ಇತ್ತೀಚೆಗೆ ಪುಣೆಯ ಶಂಕರ ಕುರಾಡೆ ಎಂಬಾತ 2.89 ಲಕ್ಷ ರೂ. ವೌಲ್ಯದ ಚಿನ್ನದಿಂದ ನಿರ್ಮಿಸಲ್ಪಟ್ಟ ಮಾಸ್ಕ್ನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದ.
Next Story