ರಾಜ್ಯ ಯುನಿವರ್ಸಿಟಿಯ ಅಂತಿಮ ಪರೀಕ್ಷೆ ರದ್ದುಪಡಿಸಿದ ದಿಲ್ಲಿ ಸರಕಾರ
ಹೊಸದಿಲ್ಲಿ,ಜು.11: ದಿಲ್ಲಿ ಸರಕಾರವು ಸ್ಟೇಟ್ ಯುನಿವರ್ಸಿಟಿಯ ಮುಂಬರುವ ಎಲ್ಲ ಸೆಮಿಸ್ಟರ್ ಹಾಗೂ ಫೈನಲ್ ಪರೀಕ್ಷೆಗಳನ್ನು ರದ್ದುಪಡಿಸಲು ನಿರ್ಧರಿಸಿದೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದಿಲ್ಲಿಯ ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ, ತರಗತಿಗಳೇ ನಡೆಯದೆ ಸೆಮಿಸ್ಟರ್ ಪರೀಕ್ಷೆ ನಡೆಸುವುದು ತುಂಬಾ ಕಷ್ಟ. ಕೊರೋನ ವೈರಸ್ನಿಂದಾಗಿ ಶಾಲೆಗಳನ್ನು ಮುಚ್ಚುವಾಗ ಪರೀಕ್ಷೆ ನಡೆಸುವ ಹಂತದಲ್ಲಿದ್ದವು. ಪರೀಕ್ಷೆಗಳಿಲ್ಲದೆ 9ನೇ ಹಾಗೂ 11ನೇ ತರಗತಿಯ ವಿದ್ಯಾರ್ಥಿಗಳಿಗೆ ಭಡ್ತಿ ನೀಡಲು ದಿಲ್ಲಿ ಸರಕಾರ ನಿರ್ಧರಿಸಿದೆ. 10ನೇ ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೂ ಇದೇ ರೀತಿಯ ನಿರ್ಧಾರ ಕೈಗೊಳ್ಳುವಂತೆ ಎಂಎಚ್ಆರ್ಡಿಗೆ ನಾವು ಪತ್ರ ಬರೆದಿದ್ದೇವೆ ಎಂದು ಸಿಸೋಡಿಯಾ ಹೇಳಿದ್ದಾರೆ.
ಇತ್ತೀಚೆಗೆ ಶಿಕ್ಷಣ ಸಚಿವರು 10ನೇ ಹಾಗೂ 12ನೇ ತರಗತಿಯ ಪರೀಕ್ಷೆಯನ್ನು ರದ್ದುಪಡಿಸಿರುವುದಾಗಿ ಘೋಷಿಸಿದ್ದರು.
Next Story