Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬ್ಯಾರಿ ಭಾಷೆಯಲ್ಲಿ ಪಂಚತಂತ್ರ

ಬ್ಯಾರಿ ಭಾಷೆಯಲ್ಲಿ ಪಂಚತಂತ್ರ

ಅಬ್ದುಲ್ ರಝಾಕ್, ಅನಂತಾಡಿಅಬ್ದುಲ್ ರಝಾಕ್, ಅನಂತಾಡಿ11 July 2020 11:11 PM IST
share
ಬ್ಯಾರಿ ಭಾಷೆಯಲ್ಲಿ ಪಂಚತಂತ್ರ

ಮೂಲತಃ ವಿಷ್ಣುಶರ್ಮರಿಂದ ಬರೆಯಲ್ಪಟ್ಟಿದೆ ಎಂದು ನಂಬಲಾಗಿರುವ ಪಂಚತಂತ್ರವನ್ನು ಕನ್ನಡಕ್ಕೆ ತಂದ ಕೀರ್ತಿ ದುರ್ಗಸಿಂಹರಿಗೆ ಸಲ್ಲುತ್ತದೆ. ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿರುವ ಪಂಚತಂತ್ರವು ಪ್ರಾಚೀನ ಭಾರತದ ಮೇರು ಕೃತಿಗಳಲ್ಲಿ ಒಂದು. ಸಾವಿರಾರು ವರ್ಷಗಳಿಂದ ಪದೇ ಪದೇ ಪ್ರಕಟಗೊಳ್ಳುತ್ತಿರುವ, ಭಾಷಾಂತರಗೊಳ್ಳುತ್ತಿರುವ ಮತ್ತು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಪಂಚತಂತ್ರದ ಕತೆೆಗಳು ಮನುಷ್ಯನ ಬದುಕಿನ ನಾನಾ ಮುಖಗಳ ಪ್ರತಿಬಿಂಬದಂತಿವೆ.

ಪಂಚತಂತ್ರ ಎನ್ನುವುದು ನೀತಿಕತೆಗಳ ಒಂದು ಗುಚ್ಚ. ಪ್ರಕರಣವನ್ನು ಭೇದಿಸುವುದು, ಪರಾಂಬರಿಸಿ ನೋಡುವುದು, ಮಿತ್ರಭೇದ, ಸ್ನೇಹ ಸಂಪಾದಿ ಸುವುದು, ವೈರತ್ವ ಸಾಧಿಸುವುದು ಎಂಬ ಐದು ತಂತ್ರಗಳನ್ನು ಕತೆಗಳ ಮೂಲಕ ಹೆಣೆದು ಕತೆೆಯೊಳಗೆ ಉಪಕತೆಯನ್ನು ಪೋಣಿಸಿ ಬುದ್ಧಿ ಮತ್ತು ತಂತ್ರಗಳ ಮೇಲಾಟವನ್ನು ಪ್ರದರ್ಶಿಸಿ ಅಂತಿಮವಾಗಿ ಬುದ್ಧಿಯೇ ಮೇಲೆಂದು ಸಾರುವ ಪಂಚತಂತ್ರದ ಕತೆೆಗಳು ಸರ್ವ ಕಾಲಕ್ಕೂ, ಸರ್ವದೇಶಗಳಿಗೂ ವಿದಿತವಾಗಿವೆ.

ಅರೆಬಿಕ್, ಪರ್ಷಿಯನ್, ಇಂಗ್ಲಿಷ್, ಗ್ರೀಕ್, ಇಟಾಲಿಯನ್, ಫ್ರೆಂಚ್, ಸಿರಿಯನ್ , ಜರ್ಮನ್ ಮೊದಲಾದ ಪ್ರಮುಖ ಭಾಷೆಗಳಿಗೆ ಅನುವಾದ ಗೊಂಡಿರುವ ಪಂಚತಂತ್ರ ಭಾರತೀಯ ಭಾಷೆಗಳಲ್ಲಿ ಜನಜನಿತವಾದ ಕೃತಿ. ಶಾಲಾ ಕಾಲೇಜು ಪಠ್ಯಗಳಲ್ಲಿ ಅಡಕವಾಗಿರುವ ಪಂಚತಂತ್ರದ ಕತೆೆಗಳು ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲಾ ವಯೋಮಾನದವರನ್ನು ತದೇಕಚಿತ್ತದಿಂದ ಆಲಿಸುವಂತೆ ಮತ್ತು ಯೋಚಿಸುವಂತೆ ಮಾಡಬಲ್ಲ ಶಕ್ತಿಯನ್ನು ಹೊಂದಿದೆ.

ಇಂತಹ ಪ್ರಸಿದ್ಧ ಕೃತಿಯೊಂದು ಇದೀಗ ಬ್ಯಾರಿ ಭಾಷೆಗೆ ಅನುವಾದಗೊಂಡಿರುವುದು ಬ್ಯಾರಿ ಭಾಷೆಯ ಪರಿಧಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಮೈಲುಗಲ್ಲು ಎಂದು ನಾನು ಭಾವಿಸಿದ್ದೇನೆ. ಇತ್ತೀಚಿನ ದಶಕಗಳಲ್ಲಿ ಗರಿಬಿಚ್ಚಿ ತೆರೆದುಕೊಳ್ಳುತ್ತಿರುವ ಒಂದು ಭಾಷೆಗೆ ತನ್ನ ಸ್ವತಂತ್ರ ಕಥನ ಕಾವ್ಯಗಳ ಜೊತೆಯಲ್ಲಿ ಇತರ ಭಾಷೆಗಳ ಸಾಹಿತ್ಯ ಅನುವಾದಗೊಂಡರೆ ಅದು ಮೂಲಭಾಷೆಗಳಿಗಿಂತಲೂ ಸ್ವೀಕರಿಸುವ ಭಾಷೆಗೆ ಹೆಚ್ಚು ಪ್ರಯೋಜನಕಾರಿ.

ಮೂಲ ಸಾಹಿತ್ಯ ರಚನೆ ಒಂದು ಬಗೆಯ ಸ್ವಂತಿಕೆ, ಸೃಜನಶೀಲತೆಯ ಪರೀಕ್ಷೆಯಾದರೆ ಅನುವಾದ ಎನ್ನುವುದು ಪದಶೋಧನೆ, ಪದಸಂಯೋಜನೆಯ ಸವಾಲಾಗಿದೆ. ಅದರಲ್ಲೂ ನೆರೆಹೊರೆಯ ಭಾಷೆಗಳ ಗಾಢ ಪ್ರಭಾವವನ್ನು ಹೊಂದಿರುವ ಬ್ಯಾರಿ ಭಾಷೆಗೆ ವಿಶಾಲಪದ ಪ್ರಯೋಗವುಳ್ಳ ಕನ್ನಡದಿಂದ ಒಂದು ಕೃತಿಯನ್ನು ಅನುವಾದ ಮಾಡುವಾಗ ಅನುವಾದಕನಿಗೆ ಎದುರಾಗುವ ಸವಾಲುಗಳು, ಓರ್ವ ಭಾಷಾ ವಿಜ್ಞಾನಿಗೆ ಎದುರಾಗುವ ಸವಾಲುಗಳೇ ಆಗಿವೆ.

ಇಂತಹ ಸವಾಲನ್ನು ಸ್ವೀಕರಿಸಿ ಪಂಚತಂತ್ರವನ್ನು ಬ್ಯಾರಿ ಭಾಷೆಗೆ ಅನುವಾದಿಸಿ ಬ್ಯಾರಿ ಭಾಷೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಅನುವಾದಕ ಅಬ್ದುಲ್ ರಹಮಾನ್ ಕುತ್ತೆತ್ತೂರು. ಬ್ಯಾರಿ, ಕನ್ನಡ, ತುಳು ಈ ತ್ರಿಭಾಷೆಗಳಲ್ಲಿ ನೂರಾರು ಕತೆ, ಕವನ, ಲೇಖನ, ಅಧ್ಯಯನ ಪ್ರಕಾರಗಳನ್ನು ಬರೆದಿರುವ ಕುತ್ತೆತ್ತೂರು ಶುದ್ಧ ಬ್ಯಾರಿ ಪದ ಪ್ರಯೋಗಗಳಿಗೆ ಹೆಸರುವಾಸಿಯಾದವರು. ಬ್ಯಾರಿ ಪಂಚತಂತ್ರ ಬ್ಯಾರಿ ಭಾಷೆಗೆ ಒಂದು ಗರಿಯಾಗಿ ಅನುವಾದಿತವಾಗಿದೆ.

 ಐದು ತಂತ್ರಗಳನ್ನು ಬೋಧಿಸುವ ನೀತಿಕತೆಗಳನ್ನು ಬಹುತೇಕ ಮೂಲ ಬ್ಯಾರಿ ಪದಗಳನ್ನು ಬಳಸಿಕೊಂಡು ಅನುವಾದಿಸಿರುವುದು ಗಮನಾರ್ಹ ವಿಚಾರ. ಮೂಲಕತೆಗಳಿಗೆ ಚ್ಯುತಿಬಾರದಂತೆ ಅನುವಾದಿಸಿ ಬ್ಯಾರಿ ಭಾಷೆಯ ಗರಿಮೆಯನ್ನು ಹೆಚ್ಚುಮಾಡುವಲ್ಲಿ ಅನುವಾದಕ ಅಬ್ದುಲ್ ರಹಮಾನ್ ಕುತ್ತೆತ್ತೂರು ಯಶಸ್ವಿಯಾಗಿದ್ದಾರೆ.

ಕತೆಯ ಮೂಲಕ ಪಾಠ ಹೇಳುವ ವಿಧಾನ ಬಲು ಪ್ರಾಚೀನವಾದುದು ಮತ್ತು ಇಂದಿಗೂ ಕೂಡಾ ಅಷ್ಟೇ ಜನಪ್ರಿಯವಾದುದು. ಪಂಚತಂತ್ರದ ಕತೆೆಗಳು ಆಕರ್ಷಕ ಪಾಠೋಪಕರಣಗಳಂತಿವೆೆ. ಮುಂದೊಂದು ದಿನ ಶಾಲಾ ಕಾಲೇಜುಗಳಲ್ಲಿ ಬ್ಯಾರಿ ಭಾಷಾ ಕಲಿಕೆ ಆರಂಭವಾದರೆ ಆ ದಿನಗಳಲ್ಲಿ ಬ್ಯಾರಿ ಭಾಷಾ ಪಠ್ಯರಚನೆಗಾಗಿ ಈ ಪಂಚತಂತ್ರ ಕತೆೆಗಳು ಕೈಯಲ್ಲಿ ಸಿದ್ಧ ಪರಿಹಾರವಾಗಿ ಕಾಣಲು ಸಾಧ್ಯ. ಕನ್ನಡ ಮತ್ತು ಇತರ ಸಹೋದರ ಭಾಷೆಗಳಿಂದ ಬ್ಯಾರಿ ಭಾಷೆಗೆ ಇನ್ನಷ್ಟು ಕತೆ, ಕವನಗಳು ಅನುವಾದಗೊಳ್ಳಬೇಕಾದ ಜರೂರತ್ತು ಇದೆ.

share
ಅಬ್ದುಲ್ ರಝಾಕ್, ಅನಂತಾಡಿ
ಅಬ್ದುಲ್ ರಝಾಕ್, ಅನಂತಾಡಿ
Next Story
X