ಬೆಂಗಳೂರು: 2ನೇ ಬಾರಿಗೆ ಆಯುಕ್ತರ ಕಚೇರಿ ಸೀಲ್ಡೌನ್
![ಬೆಂಗಳೂರು: 2ನೇ ಬಾರಿಗೆ ಆಯುಕ್ತರ ಕಚೇರಿ ಸೀಲ್ಡೌನ್ ಬೆಂಗಳೂರು: 2ನೇ ಬಾರಿಗೆ ಆಯುಕ್ತರ ಕಚೇರಿ ಸೀಲ್ಡೌನ್](https://www.varthabharati.in/sites/default/files/images/articles/2020/07/11/250626-1594490377.jpg)
ಬೆಂಗಳೂರು, ಜು.11: ಮತ್ತಷ್ಟು ಪೊಲೀಸ್ ಸಿಬ್ಬಂದಿಗೆ ಕೋವಿಡ್-19 ಸೋಂಕು ಕಾಣಿಸಿಕೊಂಡ ಹಿನ್ನೆಲೆ ಎರಡನೇ ಬಾರಿಗೆ ಇಲ್ಲಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಆಯುಕ್ತರ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ.
ಶುಕ್ರವಾರ 9 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದ್ದು, ಹೀಗಾಗಿ, ಆಯುಕ್ತರ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ. ಮುಂದಿನ ಬುಧವಾರ ಆರಂಭಿಸಲಾಗುವುದು ಎಂದು ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.
Next Story