ಉಳ್ಳಾಲ: 4 ಮಂದಿಗೆ ಕೊರೋನ ಪಾಸಿಟಿವ್
ಉಳ್ಳಾಲ, ಜು.11: ನಗರ ಸಭಾ ವ್ಯಾಪ್ತಿಯಲ್ಲಿ ಶನಿವಾರ ಮೂವರು ಮಹಿಳೆಯರು ಸೇರಿದಂತೆ ಒಟ್ಟು ನಾಲ್ಕು ಮಂದಿಗೆ ಮಾತ್ರ ಕೊರೋನ ಸೋಂಕು ದೃಢಪಟ್ಟಿದೆ.
ಧರ್ಮ ನಗರದ 35 ವರ್ಷದ ಮಹಿಳೆ, ಸುಂದರಿ ಬಾಗ್ನ 36 ವರ್ಷದ ಮಹಿಳೆ, ಮಾಸ್ತಿಕಟ್ಟೆಯ 37 ವರ್ಷದ ಮಹಿಳೆ, ಚೆಂಬುಗುಡ್ಡೆಯಲ್ಲಿ 24 ವರ್ಷದ ಯುವಕನಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಉಳ್ಳಾಲದಲ್ಲಿ ಕೊರೊನ ತೀವ್ರಗೊಂಡ ಸಂದರ್ಭದಲ್ಲಿ ಆತಂಕಕ್ಕೀಡಾದ ಜನರು ಸ್ವಯಂ ಪ್ರೇರಿತ ಬಂದ್ ಕೂಡಾ ಮಾಡಿದ್ದರು. ಕೊರೋನ ಇರುವ ಪ್ರದೇಶಗಳಲ್ಲಿ ಸ್ವಯಂ ಪ್ರೇರಿತ ಲಾಕ್ಡೌನ್ ಮಾಡಿ ಜಾಗೃತಿ ಮೂಡಿಸಿದ್ದರು.
ಕೊಟೇಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ದಾರುಸಲಾಂನಲ್ಲಿ 39 ವರ್ಷದ ವ್ಯಕ್ತಿಗೆ ಕೊರೋನ ಇರುವುದು ದೃಢಪಟ್ಟಿದ್ದು, ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಪಾವೂರು ಗ್ರಾಮದ ಹರೇಕಳ ಪಂಜಿಮುಡಿಯಲ್ಲಿ 37ವರ್ಷದ ಮಹಿಳೆ, ಕಿನ್ಯ ಗ್ರಾಮ ವ್ಯಾಪ್ತಿಯಲ್ಲಿ 48ವರ್ಷದ ಪುರುಷ, ಬೆಳ್ಮ ಗ್ರಾಮದ ರೆಂಜಾಡಿಯಲ್ಲಿ 28 ವರ್ಷದ ಮಹಿಳೆ, ದೇರಳಕಟ್ಟೆ ಖಾಸಗಿ ಆಸ್ಪತ್ರೆ ಬಳಿ 26 ವರ್ಷದ ಯುವಕನಿಗೆ ಕೊರೋನ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಇದರಿಂದ ಜೂ.23ರಿಂದ ಈವರೆಗೆ ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 235ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.