ಐಶ್ವರ್ಯಾ ರೈ ಹಾಗೂ ಅವರ ಪುತ್ರಿಗೆ ಕೋವಿಡ್-19 ದೃಢ
ಹೊಸದಿಲ್ಲಿ, ಜು.12: ಬಾಲಿವುಡ್ನ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯ ಬಚ್ಚನ್ಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ಗೆ ಕೂಡ ಕೋವಿಡ್-19 ಸೋಂಕು ತಗಲಿರುವುದು ಶನಿವಾರ ದೃಢಪಟ್ಟಿತ್ತು.
ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಟ್ವಿಟರ್ನಲ್ಲಿ ಐಶ್ವರ್ಯ ರೈಗೆ ಕೊರೋನ ವೈರಸ್ ಸೋಂಕು ತಗಲಿರುವ ಸುದ್ದಿಯನ್ನು ಹಚ್ಚಿಕೊಂಡಿದ್ದಾರೆ.
"ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರಿಗೆ ಕೋವಿಡ್-19 ಸೋಂಕು ಇರುವುದು ಪತ್ತೆಯಾಗಿದೆ. ಶ್ರೀಮತಿ ಜಯ ಬಚ್ಚನ್ ಅವರಿಗೆ ನೆಗೆಟಿವ್ ವರದಿ ಬಂದಿದೆ. ಬಚ್ಚನ್ ಕುಟುಂಬ ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ ಎಂದು ನಾವು ಹಾರೈಸುತ್ತೇವೆ'' ಎಂದು ರಾಜೇಶ್ ಟ್ವೀಟ್ ಮಾಡಿದ್ದಾರೆ.
Next Story