ಸಾಲಿಗ್ರಾಮ ಹೊಟೇಲಿನ ಮತ್ತೆ ಐವರಿಗೆ ಕೊರೋನ ಪಾಸಿಟಿವ್
ಉಡುಪಿ, ಜು.28: ಸಾಲಿಗ್ರಾಮದ ಹೊಟೇಲ್ನ ಮತ್ತೆ ಐವರು ನೌಕರರಿಗೆ ಕೊರೋನ ಸೋಂಕು ತಗಲಿರುವುದು ಇಂದು ದೃಢಪಟ್ಟಿದೆ. ನಾಲ್ಕೈದು ದಿನಗಳ ಹಿಂದೆ ಇಲ್ಲಿನ ನೌಕರರೊಬ್ಬರಿಗೆ ಕೊರೋನ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅದೇ ದಿನ ಹೊಟೇಲ್ನ್ನು ಸೀಲ್ಡೌನ್ ಮಾಡಲಾಗಿತ್ತು. ಇದೀಗ ಅಲ್ಲೇ ರೂಮಿನಲ್ಲಿ ವಾಸವಾಗಿರುವ ಮತ್ತೆ ಐವರು ನೌಕರರಿಗೆ ಕೊರೋನ ಪಾಸಿಟಿವ್ ವರದಿ ಬಂದಿದೆ ಎಂದು ಬ್ರಹ್ಮಾವರ ತಹಶೀಲ್ದಾರ್ ತಿಳಿಸಿದ್ದಾರೆ.
ಅದೇ ರೀತಿ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಮತ್ತು ಮಾಬುಕಳ, ಬೈಂದೂರು ತಾಲೂಕಿನ ಉಪ್ಪುಂದ, ತೆಗ್ಗರ್ಸೆ, ಬೈಂದೂರು, ಕಂಬದಕೋಣೆ, ಕುಂದಾಪುರ ತಾಲೂಕಿನ ತ್ರಾಸಿ, ತೆಕ್ಕಟ್ಟೆ, ಸಿದ್ಧಾಪುರ, ಕೋಟೇಶ್ವರ, ಕಾರ್ವಾಡಿ, ಚಿತ್ತೂರು ಹಾಗೂ ಕಾರ್ಕಳ ಗ್ರಾಮದ ಇನ್ನಾ, ನಂದಳಿಕೆ, ಹಿರ್ಗಾನ ಗ್ರಾಮದ ಮನೆಗಳನ್ನು ಕೊರೋನ ಪಾಸಿಟಿವ್ ಕಾರಣಕ್ಕಾಗಿ ಇಂದು ಸೀಲ್ಡೌನ್ ಮಾಡಲಾಗಿದೆ.
Next Story