ನಾಪತ್ತೆಯಾಗಿದ್ದ ಪುತ್ತೂರಿನ ಯುವತಿ ವಿವಾಹವಾಗಿ ಪತ್ತೆ
ಪುತ್ತೂರು, ಜು.13: ಕಳೆದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿನ ನಿವಾಸಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಯುವತಿ ವಿವಾಹವಾಗಿ ಪತ್ತೆಯಾಗಿದ್ದಾರೆ.
ಕಳೆದ ಜು.4ರಂದು ತನ್ನ ಮನೆಯಿಂದ ಪುತ್ತೂರು ಪೇಟೆಗೆಂದು ಆಗಮಿಸಿದ್ದ ಯುವತಿ ಬಳಿಕ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಆಕೆಯ ತಾಯಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದರು. ಇದೀಗ ಆಕೆ ಹಾಸನದಲ್ಲಿ ಪತ್ತೆಯಾಗಿದ್ದು, ತಾನು ಪ್ರಿಯಕರನೊಂದಿಗೆ ವಿವಾಹವಾಗಿರುವುದಾಗಿ ಆಕೆ ಹಾಸನ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದು ಬಂದಿದೆ.
Next Story