ಅಜ್ಜಿನಡ್ಕ: ಹೈಮಾಸ್ಟ್ ದೀಪ ಅನಾವರಣ
ಕೋಟೆಕಾರ್, ಜು.13: ಅಜ್ಜಿನಡ್ಕ ಜಂಕ್ಷನ್ನ ಅಳವಡಿಸಲಾದ ಹೈಮಾಸ್ಟ್ ದೀಪವನ್ನು ಎಸ್ವೈಎಸ್- ಎಸ್ಸೆಸ್ಸೆಫ್-ಎಸಿಎಫ್ ಅಜ್ಜಿನಡ್ಕ ವತಿಯಿಂದ ಇತ್ತೀಚೆಗೆ ಅನಾವರಣಗೊಳಿಸಲಾಯಿತು.
ಶಾಸಕ ಯು.ಟಿ. ಖಾದರ್ ಹೈಮಾಸ್ಟ್ ದೀಪ ಉದ್ಘಾಟಿಸಿ ಮಾತನಾಡಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ದುಆಗೈದರು.
ಅಜ್ಜಿನಡ್ಕ ಬದ್ರಿಯಾ ಜುಮಾ ಮಸ್ಜಿದ್ನ ಪ್ರಧಾನ ಕಾರ್ಯದರ್ಶಿ ಅಹ್ಮದ್ ಅಜ್ಜಿನಡ್ಕ ಉಪಸ್ಥಿತರಿದ್ದರು.ಶಾಖಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಬಾತಿಷ್ ಸ್ವಾಗತಿಸಿದರು. ಶಾಖಾ ಸದಸ್ಯ ಸಲೀಂ ಕೆಎ ವಂದಿಸಿದರು.
Next Story