ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಹಕ್ಕು ತಿರುವಾಂಕೂರು ರಾಜ ಕುಟುಂಬಕ್ಕೆ : ಸುಪ್ರೀಂ ಕೋರ್ಟ್
ಹೊಸದಿಲ್ಲಿ, ಜು. 13: ದೇಶದ ಅತಿ ಶ್ರೀಮಂತ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾದ ಕೇರಳದ ಚಾರಿತ್ರಿಕ ಶ್ರೀ ಪದ್ಮನಾಭ ಸ್ವಾಮಿ ದೇವಾಲಯದ ಆಡಳಿತದಲ್ಲಿ ತಿರುವಾಂಕೂರು ರಾಜ ಕುಟುಂಬ ಹಕ್ಕನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.
ದೇವಾಲಯದ ಸೊತ್ತು ಹಾಗೂ ಆಡಳಿತವನ್ನು ನಿಯಂತ್ರಿಸಲು ಟ್ರಸ್ಟ್ ರೂಪಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ ಕೇರಳ ಉಚ್ಚ ನ್ಯಾಯಾಲಯ 2011ರಲ್ಲಿ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ಮಧ್ಯಂತರ ಕ್ರಮವಾಗಿ ತಿರುವನಂತಪುರದ ಜಿಲ್ಲಾ ನ್ಯಾಯಾಧೀಶ ಆಡಳಿತ ಸಮಿತಿಯ ಮುಖ್ಯಸ್ಥರಾಗಿರುವರು ಹಾಗೂ ಅವರು ದೇವಾಲಯದ ಎಲ್ಲ ವ್ಯವಹಾರಗಳನ್ನು ನಿರ್ವಹಿಸುವರು ಎಂದು ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ ಹೇಳಿದೆ.
ಕೇರಳ ಉಚ್ಚ ನ್ಯಾಯಾಲಯ 2011 ಜನವರಿ 31ರಂದು ನೀಡಿದ ತೀರ್ಪು ಪ್ರಶ್ನಿಸಿ ತಿರುವಾಂಕೂರು ರಾಜ ಕುಟುಂಬದ ನ್ಯಾಯವಾದಿಗಳು ಸಲ್ಲಿಸಿದ ಒಂದು ಮನವಿ ಸೇರಿದಂತೆ ಮನವಿಗಳ ಗುಚ್ಛದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
Next Story