ಅಮಲು ಪದಾರ್ಥ ನೀಡಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ‘ಸ್ವಯಂಘೋಷಿತ ದೇವಮಾನವ’ನ ಬಂಧನ
ಲಕ್ನೋ: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಲ್ಲಿ ಆಶ್ರಮವೊಂದರ ಮುಖ್ಯಸ್ಥ, ಸ್ವಯಂಘೋಷಿತ ದೇವಮಾನವನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮುಝಫ್ಫರ್ ನಗರದಲ್ಲಿ ನಡೆದಿದೆ.
ಬಂಧಿತ ಆಶ್ರಮದ ಮುಖ್ಯಸ್ಥನನ್ನು ಭಕ್ತಿ ಭೂಷಣ್ ಗೋವಿಂದ್ ಮಹಾರಾಜ್ ಎಂದು ಗುರುತಿಸಲಾಗಿದ್ದು, ಆತನ ಜೊತೆ ಆತನ ಆಪ್ತ ಅಖಿಲೇಶ್ ದಾಸ್ ಎಂಬವನನ್ನೂ ಬಂಧಿಸಲಾಗಿದೆ.
ಭಕ್ತಿ ಭೂಷಣ್ ಮಕ್ಕಳಿಗೆ ಅಮಲು ಪದಾರ್ಥ ನೀಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮತ್ತು ಅವರ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
“ಈ ಎಲ್ಲಾ ಮಕ್ಕಳು ಈಶಾನ್ಯ ರಾಜ್ಯದವರು. ಹೆಚ್ಚಿನವರು ಮಿಝೋರಾಂ ಮತ್ತು ತ್ರಿಪುರಾದವರು. ಇವರಲ್ಲಿ ನಾಲ್ವರು ಮಕ್ಕಳ ಮೇಲೆ ಪ್ರಮುಖ ಆರೋಪಿ ಭಕ್ತಿ ಭೂಷಣ್ ಲೈಂಗಿಕ ದೌರ್ಜನ್ಯವೆಸಗಿದ್ದಾನೆ” ಎಂದು ಮುಝಫ್ಫರ್ ನಗರದ ಭೋಪಾ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.
Next Story