ಕಲ್ಲಡ್ಕ: ಇಲೆಕ್ಟ್ರಾನಿಕ್ಸ್ ದಾಸ್ತಾನು ಬೆಂಕಿಗಾಹುತಿ
ಬಂಟ್ವಾಳ, ಜು.13: ಬೀಡಿಯನ್ನು ಸಿಗಡಿ ಮಾಡುವ ಕೊಠಡಿ ಹಾಗೂ ದಾಸ್ತಾನಿರಿಸಿದ್ದ ಇಲೆಕ್ಟ್ರಾನಿಕ್ಸ್ ವಸ್ತುಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ತಾಲೂಕಿನ ಕಲ್ಲಡ್ಕದಲ್ಲಿ ಸೋಮವಾರ ಸಂಭವಿಸಿದೆ.
ಕಲ್ಲಡ್ಕದ ಪೀದಾ ಎಂಟರ್ ಪ್ರೈಸಸ್ ವಾಣಿಜ್ಯ ಸಂಕೀರ್ಣದಲ್ಲಿರುವ ಕೆ.ಎಸ್. ಬೀಡಿ ಸಿಗಡಿ ಮಾಡುವ ಕೊಠಡಿಗೆ ಬೆಂಕಿ ತಗುಲಿ ಸಿಗಡಿಗೆ ಇಟ್ಟಿದ್ದ ಬೀಡಿಗಳು ನಾಶವಾಗಿದೆ. ಬೆಂಕಿ ಕೊಠಡಿಯ ಮೇಲಿನ ಅಂತಸ್ತಿನಲ್ಲಿದ್ದ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ದಾಸ್ತಾನಿರಿಸಿದ್ದ ಕೊಠಡಿಗೂ ವ್ಯಾಪಿಸಿದ್ದರಿಂದ ಕೊಠಡಿಯಲ್ಲಿದ್ದ ಇಲೆಕ್ಟ್ರಾನಿಕ್ಸ್ ವಸ್ತುಗಳು ಸುಟ್ಟು ಕರಕಲವಾಗಿದೆ.
ಇಲೆಕ್ಟ್ರಾನಿಕ್ಸ್ ವಸ್ತುಗಳ ದಾಸ್ತಾನು ಕೆ.ಎಸ್.ಫಾರೂಕ್ ಎಂಬವರಿಗೆ ಸೇರಿದ್ದು ಬೀಡಿ ಫಾರೂಕ್ ಅವರ ಕುಟುಂಬದವರದ್ದಾಗಿದೆ ಎನ್ನಲಾಗಿದೆ. ಘಟನೆಯಿಂದ ಅಂದಾಜು 15 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಸಿ ಬೆಂಕಿ ನಂದಿಸಿದ್ದಾರೆ.
Next Story