ಚಿಕ್ಕಮಗಳೂರು: ಕೋವಿಡ್ಗೆ ಮತ್ತೊಂದು ಬಲಿ
ಚಿಕ್ಕಮಗಳೂರು, ಜು.14: ಕೊರೋನ ವೈರಸ್ ಸೋಂಕಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದೆ.
ಕೊರೋನ ಪಾಸಿಟಿವ್ ಆಗಿದ್ದ ನಗರದ ಗೌರಿ ಕಾಲುವೆ ನಿವಾಸಿ 56 ವರ್ಷದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಸೋಂಕಿಗೆ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ ಆರಕ್ಕೇರಿದೆ.
ಅಸ್ತಮಾ ಸೇರಿದಂತೆ ವಿವಿಧ ಖಾಯಿಲೆಯಿಂದ ಬಳಲುತ್ತಿದ್ದ 56 ವರ್ಷದ ವ್ಯಕ್ತಿಯನ್ನು ರವಿವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Next Story