ಕಣಚೂರು ಮಹಿಳಾ ಪದವಿಪೂರ್ವ ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ
ಕೊಣಾಜೆ: ದೇರಳಕಟ್ಟೆಯ ಕಣಚೂರು ಮಹಿಳಾ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 100 ಮತ್ತು ವಾಣಿಜ್ಯ ವಿಭಾಗದಲ್ಲಿ 98.02 ಫಲಿತಾಂಶ ಪಡೆದಿರುತ್ತಾರೆ. ಕಾಲೇಜಿಗೆ ಶೇ. 99% ಫಲಿತಾಂಶ ಲಭಿಸಿದೆ.
ಪರೀಕ್ಷೆ ಬರೆದ ಒಟ್ಟು 107 ವಿದ್ಯಾರ್ಥಿಗಳಲ್ಲಿ 106 ಮಂದಿ ಉತ್ತೀರ್ಣರಾಗಿದ್ದಾರೆ. 20 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 73 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಫೀಸತುಲ್ ಮಿಶ್ರಿಯಾ ಶೇಕಡಾ 91.05, ವಿಜ್ಞಾನ ವಿಭಾಗದಲ್ಲಿ ನೆಬಿಸಾ ಮುನೀಮ ಶೇ. 93.33% ಗರಿಷ್ಟ ಅಂಕಗಳನ್ನು ಗಳಿಸಿದ್ದಾರೆ.
Next Story