ಜು. 15ರಂದು ಸಿಬಿಎಸ್ಇ 10ನೇ ತರಗತಿ ಫಲಿತಾಂಶ: ಸಚಿವ
ಹೊಸದಿಲ್ಲಿ, ಜು. 14: ಸಿಬಿಎಸ್ಇ 10ನೇ ತರಗತಿಯ ಫಲಿತಾಂಶ ನಾಳೆ ಬಿಡುಗಡೆಯಾಗಲಿದೆ. ಸಿಬಿಎಸ್ಇ 10ನೇ ತರಗತಿಯ ಫಲಿತಾಂಶವನ್ನು ಜುಲೈ 15ರಂದು ಬಿಡುಗಡೆ ಮಾಡಲಾಗುವುದು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ಟ್ವೀಟ್ ಮಾಡಿದ್ದಾರೆ. ಆದರೆ, ಫಲಿತಾಂಶ ಬಿಡುಗಡೆಯಾಗುವ ಸಮಯ ಉಲ್ಲೇಖಿಸಿಲ್ಲ.
ಫಲಿತಾಂಶ ಬಿಡುಗಡೆಯಾದರೆ, ಪರೀಕ್ಷೆಗೆ ಹಾಜರಾದ 18 ಲಕ್ಷ ವಿದ್ಯಾರ್ಥಿಗಳು ವೆಬ್ಸೈಟ್ (cbseresults.nic.in., results.nic.in) ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಲಿದ್ದಾರೆ. ಫಲಿತಾಂಶ (Umang app) ನಲ್ಲಿ ಕೂಡ ಲಭ್ಯವಾಗಲಿದೆ.
Next Story