ದ್ವಿತೀಯ ಪಿಯುಸಿ ಫಲಿತಾಂಶ: ಇಬ್ರಾಹೀಂ ರಿಹಾಬ್ ಕೆ. ರಿಗೆ ಶೇ.96 ಅಂಕ
ಮಂಗಳೂರು, ಜು.14: ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಇಬ್ರಾಹೀಂ ರಿಹಾಬ್ ಕೆ. 578 (ಶೇ.96.33) ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪಿಸಿಎಂಬಿಯಲ್ಲಿ 395 ಅಂಕಗಳಿಸಿ ಶೇ.98.75 ಫಲಿತಾಂಶ ದಾಖಲಿಸಿದ್ದಾರೆ. ಗಣಿತ-100ಕ್ಕೆ 100 ಅಂಕ, ರಸಾಯನಶಾಸ್ತ್ರ- 99, ಜೀವಶಾಸ್ತ್ರ- 99, ಭೌತಶಾಸ್ತ್ರ-97, ಇಂಗ್ಲಿಷ್- 86 ಮತ್ತು ಹಿಂದಿಯಲ್ಲಿ 97 ಅಂಕಗಳನ್ನು ಪಡೆದಿದ್ದಾರೆ.
ಇಬ್ರಾಹೀಂ ರಿಹಾಬ್ ಇವರು ಕೊಣಾಜೆ-ಕೋಡಿಜಾಲ್ ನಿವಾಸಿ ಹಬೀಬ್ ಕೋಡಿಜಾಲ್ ಹಾಗೂ ರಮ್ಲತ್ ಅವರ ಪುತ್ರ. ಇವರು ಕಾಂಗ್ರೆಸ್ ಮುಖಂಡ ಹಾಜಿ ಇಬ್ರಾಹೀಂ ಕೋಡಿಜಾಲ್ ಅವರ ಮೊಮ್ಮಗ. ಇಬ್ರಾಹೀಂ ರಿಹಾಬ್ ಇವರು ಮುಂದೆ ವೈದ್ಯಕೀಯ ಶಿಕ್ಷಣ ಮಾಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
Next Story