ಮಲ್ಪೆ: ಸಮುದ್ರ ಕಿನಾರೆಯಲ್ಲಿ ಅಪರಿಚಿತ ಶವ ಪತ್ತೆ
ಮಲ್ಪೆ, ಜು.14: ತೊಟ್ಟಂ ಪುಟಾರ್ಡೋ ಗೆಸ್ಟ್ ಹೌಸ್ ಬಳಿಯ ಸುಮುದ್ರ ದಡದಲ್ಲಿ ಸುಮರು 60-65 ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ವೊಂದು ಜು.14ರಂದು ಬೆಳಗ್ಗೆ 7ಗಂಟೆಗೆ ಪತ್ತೆಯಾಗಿದೆ.
ಮೃತದೇಹದ ಮೈಮೇಲೆ ನೀಲಿಬಣ್ಣದ ಚೌಕುಳಿ ತುಂಬು ತೋಳಿನ ಅಂಗಿ ಮತ್ತು ಕಂದು ಬಣ್ಣದ ಪ್ಯಾಂಟ್ ನೀಲಿ ಬಣ್ಣದ ಮಾಸ್ಕ್ ಇರುತ್ತದೆ. ಮೃತ ವ್ಯಕ್ತಿಯು ಸುಮಾರು ಒಂದು ದಿನಗಳ ಹಿಂದೆ ಆಕಸ್ಮಿಕವಾಗಿ ಅಥವಾ ಇನ್ಯಾವುದೇ ರೀತಿಯಲ್ಲಿ ಸುಮುದ್ರದ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸ ಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story