ಎಲಾನ್ ಮಸ್ಕ್ ರನ್ನು ಹಿಂದಿಕ್ಕಿದ ಮುಖೇಶ್ ಅಂಬಾನಿ ವಿಶ್ವದಲ್ಲೇ 6ನೆ ಅತ್ಯಂತ ಶ್ರೀಮಂತ
ಹೊಸದಿಲ್ಲಿ: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಆಲ್ಫಾಬೆಟ್ ಸಹ ಸ್ಥಾಪಕರಾದ ಸರ್ಜೆ ಬ್ರಿನ್ ಮತ್ತು ಲ್ಯಾರಿ ಪೇಜ್ ರನ್ನು ಹಿಂದಿಕ್ಕಿರುವ ಮುಖೇಶ್ ಅಂಬಾನಿ ವಿಶ್ವದಲ್ಲೇ 6 ನೆ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಕಳೆದ ವಾರವಷ್ಟೇ ಅವರು ವಾರೆನ್ ಬಫೆಟ್ ರನ್ನು ಹಿಂದಿಕ್ಕಿದ್ದು, ಇದೀಗ ಅವರ ಆಸ್ತಿಯ ಮೌಲ್ಯ 72.4 ಬಿಲಿಯನ್ ಡಾಲರ್ ಗಳಾಗಿದೆ. ಅಂಬಾನಿಯವರ ರಿಲಯನ್ಸ್ ಉದ್ಯಮ ಸಮೂಹದ ಶೇರುಗಳ ಮೌಲ್ಯದಲ್ಲಿ ಮಾರ್ಚ್ ಆನಂತರ ಎರಡು ಪಟ್ಟು ಏರಿಕೆಯಾಗಿವೆ.
ಫೇಸ್ಬುಕ್ ಹಾಗೂ ಸಿಲ್ವರ್ಲೇಕ್ ಸೇರಿದಂತೆ ಹಲವಾರು ಕಂಪೆನಿಗಳು ರಿಲಯನ್ಸ್ ಡಿಜಿಟಲ್ ಉದ್ಯಮದಲ್ಲಿ 15 ಶತಕೋಟಿ ಡಾಲರ್ ಗೂ ಹೆಚ್ಚು ಹೂಡಿಕೆಯನ್ನು ಮಾಡಿವೆ.
Next Story