ದ್ವಿತೀಯ ಪಿಯುಸಿ ಫಲಿತಾಂಶ: ರಿಫಾತ್ ಮರ್ಯಮ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ
ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಿಫಾತ್ ಮರ್ಯಮ್ 581(ಶೇ.96.83) ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಪಿಸಿಎಂಬಿಯಲ್ಲಿ 394 ಅಂಕ ಗಳಿಸಿ ಶೇ.98 ಫಲಿತಾಂಶ ದಾಖಲಿಸಿದ್ದಾರೆ. ಫಿಸಿಕ್ಸ್ ನಲ್ಲಿ 98, ಕೆಮಿಸ್ಟ್ರಿಯಲ್ಲಿ 99, ಮ್ಯಾಥಮೆಟಿಕ್ಸ್ ನಲ್ಲಿ 100, ಬಯೋಲಜಿಯಲ್ಲಿ 97, ಇಂಗ್ಲಿಷ್ನಲ್ಲಿ 87 ಮತ್ತು ಹಿಂದಿಯಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ಈಕೆ ಬೋಳಾರ ನಿವಾಸಿ ಬಿ. ಅಬ್ದುಲ್ ರಝಾಕ್ರ ಮೊಮ್ಮಗಳು.
Next Story