ಉಡುಪಿ: ಚರ್ಚ್ಗಳಲ್ಲಿ ಧಾರ್ಮಿಕ ಆಚರಣೆ ರದ್ದು
ಉಡುಪಿ, ಜು.15: ಜಿಲ್ಲೆಯಲ್ಲಿ ಕೊರೋನ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಂತೆ ಜಿಲ್ಲೆಯ ಎಲ್ಲ ಚರ್ಚ್ಗಳಲ್ಲಿ ಎಲ್ಲ ರೀತಿಯ ಸಾಮೂಹಿಕ ಪೂಜೆ, ಧಾರ್ಮಿಕ ಆಚರಣೆಗಳನ್ನು ರದ್ದುಗೊಳಿಸಲಾಗಿದೆ.
ಈ ಆದೇಶವು ಜಿಲ್ಲಾಡಳಿತದ ಮುಂದಿನ ಆದೇಶ ಬರುವ ತನಕ ಜಾರಿಯಲ್ಲಿರಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಆದೇಶಿಸಿದ್ದಾರೆ.
Next Story