ನಿತೀಶ್ ಕುಮಾರ್ ರಿಂದ ಉದ್ಘಾಟನೆಗೊಂಡ 260 ಕೋಟಿ ರೂ. ವೆಚ್ಚದ ಸೇತುವೆ 29 ದಿನಗಳಲ್ಲೇ ಕುಸಿತ!
ನದಿ ನೀರಿನಲ್ಲಿ ಕೊಚ್ಚಿ ಹೋದ ಸೇತುವೆ
ಗೋಪಾಲ್ ಗಂಜ್: ಬಿಹಾರ ಸಿಎಂ ಅವರಿಂದ ಉದ್ಘಾಟನೆಗೊಂಡು 29 ದಿನಗಳು ಕಳೆಯುವಾಗಲೇ 263 ಕೋಟಿ ರೂ. ವೆಚ್ಚದ ಸೇತುವೆಯೊಂದು ಕುಸಿದು ಬಿದ್ದಿದೆ.
ಸುಮಾರು 263 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸತ್ತರ್ ಘಾಟ್ ಸೇತುವೆಯ ಒಂದು ಭಾಗ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ನಾಲ್ಕು ದಿನಗಳಿಂದ ಬಿಹಾರದಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಯಲ್ಲಿ ನೀರು ಹೆಚ್ಚಾದ ರಭಸಕ್ಕೆ ಸೇತುವೆ ಕುಸಿದಿದೆ.
ಹೆಚ್ಚುತ್ತಿದ್ದ ನೀರಿನ ರಭಸವನ್ನು ತಡೆಯಲು ಈ ಸೇತುವೆಗೆ ಸಾಧ್ಯವಾಗಲಿಲ್ಲ. ಸೇತುವೆ ಕುಸಿದ ನಂತರ ಸುತ್ತಮುತ್ತಲ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
#India: Part of the Sattarghat bridge on Gandak river in Bihar washed away by floodwaters. The bridge was inaugurated last month by CM Nitish Kumar. Project's estimated to have costed over Rs 260 cr. #BiharFloods #BiharFlood #floodingpic.twitter.com/KJFQy4Ut5l
— Annu Kaushik (@AnnuKaushik253) July 16, 2020
Next Story