ಹೆಜಮಾಡಿ: ಜಿಲ್ಲಾ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ
ಪಡುಬಿದ್ರಿ, ಜು.16: ಉಡುಪಿ ಜಿಲ್ಲೆಯಲ್ಲಿ 14 ದಿನಗಳವರೆಗೆ ಎಲ್ಲಾ ಜಿಲ್ಲಾ ಗಡಿಗಳನ್ನು ಸೀಲ್ಡೌನ್ ಮಾಡಿರುವ ಹಿನ್ನಲೆಯಲ್ಲಿ ಹೆಜಮಾಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ.
ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗ ಪ್ರವೇಶಿಸುವ ಹೆಜಮಾಡಿ ಗಡಿಯಲ್ಲಿ ಪೊಲೀಸರು ಬುಧವಾರ ರಾತ್ರಿಯಿಂದಲೇ ಇತರ ಜಿಲ್ಲೆಗಳಿಂದ ಪ್ರವೇಶಿಸುವ ವಾಹನಗಳ ತಪಾಸಣೆ ಆರಂಭಿಸಿದ್ದಾರೆ. ಗುರುವಾರ ಕಟ್ಟುನಿಟ್ಟಿನ ತಪಾಸಣೆ ನಡೆಸಿ ಅನಗತ್ಯ ಸಂಚರಿಸುವ ವಾಹನಗಳನ್ನು ಹಿಂದಕ್ಕೆ ಕಳುಹಿಸಿದರು. ಅನ್ಯ ಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಆಗಮಿಸುವವರ ಸಮಗ್ರ ವಿವರ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ.
Next Story