ಕಾಪು ತಾಲೂಕಿನಲ್ಲಿ ಎಂಟು ಮಂದಿಗೆ ಕೊರೋನ ಪಾಸಿಟಿವ್: ಹೊಟೇಲ್,ಮಳಿಗೆ ಸೀಲ್ಡೌನ್
ಕಾಪು, ಜು.16: ತಾಲೂಕಿನಲ್ಲಿ ಗುರುವಾರ ಒಟ್ಟು ಮಂದಿಯಲ್ಲಿ ಕೊರೋನ ಸೋಂಕಿಗೆ ಪಾಸಿಟಿವ್ ವರದಿ ಬಂದಿದೆ. ಸೋಂಕಿತರನ್ನು ಉಡುಪಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಮನೆ ಪರಿಸರವನ್ನು ಸೀಲ್ಡೌನ್ ಮಾಡಲಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.
ಕುರ್ಕಾಲಿನಲ್ಲಿ 32 ವರ್ಷ ಪ್ರಾಯದ ಮಹಿಳೆ ಮತ್ತು 9 ವರ್ಷದ ಬಾಲಕ, ಗಿರಿನಗರದ 18 ವರ್ಷದ ಯುವಕ ಮತ್ತು 5 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ. ಕಾಪು ಮಲ್ಲಾರಿನಲ್ಲಿ 40 ವರ್ಷದ ಮಹಿಳೆ, ಮೂಳೂರಿನ 46 ವರ್ಷದ ಮಹಿಳೆ, ಉಳಿಯಾರಗೋಳಿಯ 70 ವರ್ಷ ಪ್ರಾಯದ ವ್ಯಕ್ತಿ, ಕೈಪುಂಜಾಲಿನ 45 ವರ್ಷದ ಪುರುಷ ಮತ್ತು ಪಾದೂರಿನ 23 ವರ್ಷದ ಯುವಕನಲ್ಲೂ ಕೊರೋನಾ ಪಾಸಿಟಿವ್ ಕಂಡುಬಂದಿದೆ.
ಇವರಲ್ಲಿ ಕೈಪುಂಜಾಲು ಮತ್ತು ಮೂಳೂರಿನ ಸೋಂಕಿತರು ಈಗಾಗಲೇ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಅವರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಸೀಲ್ಡೌನ್: ಬುಧವಾರದ ವರದಿಯಲ್ಲಿ ಪಡುಬಿದ್ರಿಯ ಹೊಟೇಲ್ನ ಇಬ್ಬರು ಸಿಬ್ಬಂದಿಗಳಿಗೆ ಹಾಗೂ ಗೃಹೋಪಕರಣಗಳ ಮಳಿಗೆಯ ಸಿಬ್ಬಂದಿಯೊಬ್ಬರಿಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಹೊಟೇಲ್ ಹಾಗೂ ಮಳಿಗೆಯನ್ನು ಸೀಲ್ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.