ಪೊಲೀಸ್ ಇನ್ಸ್ ಪೆಕ್ಟರ್ ಗೆ ಕೊರೋನ ದೃಢ: ಒಂದೇ ಠಾಣೆಯ ಏಳನೇ ಪ್ರಕರಣ
ಹುಬ್ಬಳ್ಳಿ, ಜು.16: ಇಲ್ಲಿನ ಘಂಟಿಕೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗೆ ಕೊರೋನ ಸೋಂಕು ದೃಢಪಟ್ಟಿದ್ದು, ಠಾಣೆಯ ಸಿಬ್ಬಂದಿಗಳಲ್ಲೂ ಈಗ ಆತಂಕ ಮನೆ ಮಾಡಿದೆ.
ಇತ್ತೀಚಿಗಷ್ಟೇ ಇನ್ಸ್ಪೆಕ್ಟರ್ ಗೆ ಕೋವಿಡ್-19 ತಪಾಸಣೆ ಮಾಡಿದಾಗ ಪರೀಕ್ಷೆಯಲ್ಲಿ ಮೊದಲು ನೆಗೆಟಿವ್ ಎಂದು ಬಂದಿತ್ತು. ಆ ನಂತರ ಶೀತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅವರನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಜುಲೈ 2ರಂದು ಠಾಣೆಯಲ್ಲಿ ಗೃಹರಕ್ಷಕಿಯೊಬ್ಬರಿಗೆ ಮೊದಲು ಕೊರೋನ ಸೋಂಕು ದೃಢಪಟ್ಟಿತ್ತು. ನಂತರ ಮಹಿಳಾ ಕಾನ್ಸ್ ಟೇಬಲ್ ಸೇರಿ ಐವರು ಸಿಬ್ಬಂದಿಗೆ ಸೋಂಕು ಹರಡಿತ್ತು. ಇದೀಗ ಠಾಣೆಯ ಇನ್ಸ್ ಪೆಕ್ಟರ್ ಗೆ ಸೋಂಕು ತಗುಲಿದ್ದು, ಒಂದೇ ಠಾಣೆಯಲ್ಲಿ ಒಟ್ಟು 7 ಸಿಬ್ಬಂದಿಗೆ ಸೋಂಕು ತಗಲಿದಂತಾಗಿದೆ ಎಂದು ಮೂಲಗಳು ತಿಳಿಸಿವೆ.
Next Story