ಗುಂಪುಗಳ ನಡುವೆ ಗಲಾಟೆ: ಯುವಕ ಸಾವು, ಮತ್ತೋರ್ವನಿಗೆ ತೀವ್ರ ಗಾಯ

ಹಾಸನ, ಜು.16: ನಗರದ ರಿಂಗ್ ರಸ್ತೆಯಲ್ಲಿ ಗುಂಪೊಂದು ಸ್ಲಂ ಬೋರ್ಡ್ ಭಾಗದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದು, ಓರ್ವ ಮೃತಪಟ್ಟು ಮತ್ತೋರ್ವ ತೀವ್ರ ಗಾಯಗೊಂಡು ಸಾವು-ಬದುಕಿನ ನಡುವೇ ಹೋರಾಡುತ್ತಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ರಿಂಗ್ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ತಾನದ ಬಳಿ ಇರುವ ಬಾರ್ ಬಳಿ ಯುವಕರು ಕಂಠಪೂರ್ತಿ ಕುಡಿದಿದ್ದು, ಈ ವೇಳೆ ಮತ್ತೊಂದು ಗುಂಪಿನ ಜೊತೆ ಮಾತಿಗೆ ಮಾತು ನಡೆದು ನಂತರ ಕೈಕೈ ಮಿಲಾಯಿಸುವಷ್ಟು ಬೆಳೆದಿದೆ. ಈ ವೇಳೆ ನಡೆಸಿದ ಮಾರಣಾಂತಿಕ ಹಲ್ಲೆಯಲ್ಲಿ ಪುನೀತ್ (23) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೋರ್ವ ಯುವಕ ಚಂದನ್ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ.
ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿರುವುದಿಲ್ಲ. ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story





