ಪುತ್ತೂರು-ಕಡಬ ತಾಲೂಕು: ಇಬ್ಬರು ಗರ್ಭಿಣಿಯರ ಸಹಿತ 16 ಮಂದಿಗೆ ಕೊರೋನ ಸೋಂಕು

ಪುತ್ತೂರು, ಜು.17: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಕೊರೋನ ಹಾವಳಿ ತೀವ್ರಗೊಂಡಿದ್ದು, ಶುಕ್ರವಾರ ಇಬ್ಬರು ಗರ್ಭಿಣಿಯರ ಸಹಿತ ಒಟ್ಟು 16 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಪುತ್ತೂರು ತಾಲೂಕು:
ಉಪ್ಪಿನಂಗಡಿ ಕೆರೆಮೂಲೆ ನಿವಾಸಿ 28 ವರ್ಷದ ಗರ್ಭಿಣಿ, 48 ವರ್ಷದ ಕೆದಂಬಾಡಿ ಗ್ರಾಮದ ತಿಂಗಳಾಡಿ ನಿವಾಸಿ ಪುರುಷ, ಮಾಡ್ನೂರು ಗ್ರಾಮದ 40 ವರ್ಷದ ಮಹಿಳೆ, ಆಕೆಯ ಪುತ್ರ 15 ವರ್ಷದ ಬಾಲಕ, ರೆಂಜಲಾಡಿ ಗ್ರಾಮದ 27 ವರ್ಷದ ಗರ್ಭಿಣಿ ಮಹಿಳೆ, ಕೆಮ್ಮಿಂಜೆ ಗ್ರಾಮದ ಸಂಜಯ ನಗರ ನಿವಾಸಿ 58, ವರ್ಷದ ಪುರುಷ, ಕುರಿಯ ಗ್ರಾಮದ 24 ವರ್ಷದ ಯುವಕ ಮತ್ತು ಕೆದಂಬಾಡಿ ಗ್ರಾಮದ 32 ವರ್ಷದ ಯುವಕನೊಬ್ಬನಿಗೆ ಕೊರೋನ ತಗಲಿರುವುದು ದೃಢಪಟ್ಟಿದೆ.
ಕಡಬ ತಾಲೂಕು:
ಬಿಳಿನೆಲೆ ಗ್ರಾಮದ ನೆಟ್ಟಣ ರೈಲ್ವೆ ನಿಲ್ದಾಣದಲ್ಲಿರುವ 28 ವರ್ಷದ ಬಿಹಾರ ಮೂಲದ ರೈಲ್ವೇ ಕಾರ್ಮಿಕ, ಕಡಬ ನಿವಾಸಿಗಳಾದ 20 ವರ್ಷದ ಯುವಕ, 49 ವರ್ಷ ಪ್ರಾಯದ ಪುರುಷ, ಅವರ ಪುತ್ರ 16 ವರ್ಷದ ಬಾಲಕ, ಅವರ ಪುತ್ರಿ 19 ವರ್ಷದ ಯುವತಿ, ನೆಲ್ಯಾಡಿ ಗ್ರಾಮದ 19 ವರ್ಷದ ಯುವಕನಲ್ಲಿ ಶುಕ್ರವಾರ ಕೊರೋನ ಸೋಂಕು ಕಾಣಿಸಿಕೊಂಡಿದೆ.
ಇದರೊಂದಿಗೆ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಈ ತನಕ ಒಟ್ಟು 88 ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾದಂತಾಗಿದೆ.








