ಪೆರಂಪಳ್ಳಿ ಶ್ರೀಶ ಭಟ್

ಉಡುಪಿ, ಜು.17: ಉಡುಪಿ ಮೂಡುಪೆರಂಪಳ್ಳಿ ನಿವಾಸಿ ಧಾರ್ಮಿಕ ಮುಖಂಡರಾಗಿದ್ದ ಶ್ರೀಶ ಭಟ್ (49) ಹೃದಯಾಘಾತದಿಂದ ಗುರುವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವ ಪೌರೋಹಿತ್ಯ ವೃತ್ತಿ ನಡೆಸುತ್ತಿದ್ದ ಇವರು ಅವಿವಾಹಿತರಾಗಿದ್ದರು. ಮೃತರು ತಾಯಿ, ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
Next Story





