Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಜು.22-24: ಭೂ ಮಸೂದೆ ಕಾಯ್ದೆಗೆ...

ಜು.22-24: ಭೂ ಮಸೂದೆ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ

ವಾರ್ತಾಭಾರತಿವಾರ್ತಾಭಾರತಿ17 July 2020 6:25 PM IST
share

 ಮಂಗಳೂರು,ಜು.17: ಕರ್ನಾಟಕ ರಾಜ್ಯದಾದ್ಯಂತ ಜುಲೈ  22,23,24 ರಂದು ಜಿಲ್ಲಾ ಮಟ್ಟದಲ್ಲಿ ಪತ್ರಿಕಾಗೋಷ್ಠಿ, ಹೇಳಿಕೆ ನೀಡಿ, ಜುಲೈ 27 ರಿಂದ 31 ರೊಳಗೆ ಎಲ್ಲಾ ತಾಲೂಕು ಕಛೇರಿ ಮುಂದೆ ಸರಕಾರದ ಗೆಜೆಟ್(ರಾಜ್ಯ ಪತ್ರ) ಪ್ರತಿಯನ್ನು ಸುಡುವುದರ ಮೂಲಕ ಪ್ರತಿಭಟನೆ ಮಾಡಿ, ಭೂಮಸೂದೆ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ರಾಜ್ಯಪಾಲರು, ಪ್ರಧಾನ ಮಂತ್ರಿ,ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಗಳಿಗೆ ಮನವಿಸಲ್ಲಿಸಲು ಎಲ್ಲಾ ಗ್ರಾಮ ಸಮಿತಿ, ತಾಲೂಕು ಸಮಿತಿ, ಜಿಲ್ಲಾ ಸಮಿತಿಗಳಿಗೆ ಕರೆ ನೀಡಿದೆ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರದೇಶ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯಸರ್ಕಾರ ಭೂ ಸುಧಾರಣಾ ಕಾಯ್ದೆ 1961, 79ಎ, ಬಿ, 63ಎ, 80, ಇತ್ಯಾದಿ ಕಲಂಗಳಿಗೆ ಪೂರ್ವಾನ್ವಯವಾಗುವಂತೆ  ತಿದ್ದುಪಡಿ ತಂದು, ರಾಜ್ಯದ ಕೃಷಿಕರನ್ನು ಬೀದಿಪಾಲು ಮಾಡುವ, ಉಳ್ಳವರು ಕೃಷಿ ಜಮೀನು ಖರೀದಿಸಿ  ರಿಯಲ್ ಎಸ್ಟೇಟ್ ದಂಧೆಗಾಗಿ ಮತ್ತು ತಮ್ಮಿಚ್ಚೆಗೆ ತಕ್ಕಂತೆ ಬಳಸುವ ಅಧಿಕಾರ ನೀಡಿದೆ. ಈ ಕ್ರಮದಿಂದ ಕೈಗಾರಿಕಾ ಅಭಿವೃದ್ಧಿಯಾಗುತ್ತದೆಯೆಂಬ ಪೊಳ್ಳು ಸಮರ್ಥನೆಯನ್ನು ಸರಕಾರ ನೀಡುತ್ತಿದೆ. ಕೃಷಿಯೇತರರೂ ಕೃಷಿಯಲ್ಲಿ ತೊಡಗಿ ಕೃಷಿ ಉತ್ಪಾದನೆಯನ್ನು ಜಾಸ್ತಿ ಮಾಡಲು ಈ ತಿದ್ದುಪಡಿಯನ್ನು ಮಾಡಲಾಗಿದೆಯೆಂಬ ವಾದವನ್ನು ಮುಂದಿಡಲಾಗುತ್ತಿದೆ. ಸರಕಾರಕ್ಕೆ ನಿಜವಾಗಲೂ ಕೈಗಾರಿಕೆಗಳ ಬಗ್ಗೆ ಕಾಳಜಿಯಿದ್ದರೆ, ಕೈಗಾರಿಕಾ ಅಭಿವೃದ್ಧಿ ಮಂಡಳಿ(KIADB) ಯ ಮುಖಾಂತರ ಈಗಾಗಲೇ ರೈತರಿಂದ ವಶಪಡಿಸಿಕೊಂಡಿರುವ 12 ಸಾವಿರ ಎಕರೆಗಿಂತಲೂ ಹೆಚ್ಚು ಅಭಿವೃದ್ಧಿ ಪಡಿಸಿದ ಮತ್ತು 36 ಸಾವಿರ ಎಕರೆಗಿಂತಲೂ ಹೆಚ್ಚು ಅಭಿವೃದ್ಧಿ ಪಡಿಸದೇ ಇರುವ ಜಮೀನಿದೆ. ಅದನ್ನು ಕೈಗಾರಿಕೆಗಳಿಗೆ ಕೊಡಬಹುದಾಗಿತ್ತು. ಇದಲ್ಲದೇ,  ಸರಕಾರಿ ಅಂಕಿ ಅಂಶಗಳ ಪ್ರಕಾರವೇ ಕೈಗಾರಿಕಾ ಪ್ರದೇಶಗಳ ಸುಮಾರು 56% ಕೈಗಾರಿಕಾ ಶೆಡ್ಡುಗಳು ಅನುಪಯುಕ್ತವಾಗುಳಿದಿವೆ. ಇದಲ್ಲದೇ, ಭೂಸುಧಾರಣಾ ಕಾಯಿದೆಯ 108 ನೇ ಕಲಂಗೆ ಸರಕಾರ ಈಗಾಗಲೇ ತಿದ್ದುಪಡಿ ತಂದು ಏಕಗವಾಕ್ಷಿ ಯೋಜನೆಯಡಿ  ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹೈ ಪವರ ಸಮಿತಿಯೊಂದಕ್ಕೆ, ಅವರು ಉದ್ಯಮಿಗಳು ಕೇಳಿದ ಜಾಗದಲ್ಲಿ ಜಮೀನು ಖರೀದಿಸಲು ಅನುಮತಿಗೆ ಸರ್ವಾಧಿಕಾರ ನೀಡಲಾಗಿದೆ. ಈ ಅಧಿಕಾರ ಬಳಸಿ ಕೈಗಾರಿಕೆಗಳಿಗೆ ಭೂಮಿ ನೀಡಲು ಅವಕಾಶವಿದೆ.ಇನ್ನು ಕೃಷಿಕರಲ್ಲದವರು ಕೃಷಿಗೆ ಬರಲಿ, ಅವರಿಗೆ 54 ಎಕರೆ ಜಮೀನು ಸಾಕಲ್ಲವೇ. ಆದರೂ ಈ ತಿದ್ದುಪಡಿಯಲ್ಲಿ ಗರಿಷ್ಠ  432 ಎಕರೆ ವರೆಗೆ ಜಮೀನು ಹೊಂದಲು ಅವಕಾಶ ನೀಡಿರುವುದರ ಹಿಂದಿನ ಉದ್ದೇಶವೇನು? ಎಂದು ಸಂಘಟನೆ ಪ್ರಶ್ನಿಸಿದೆ.

ಕೊರೊನ ಮಹಾಮಾರಿ ಸಮಸ್ತ ಮಾನವತೆಯನ್ನು ಪೀಡಿಸುತ್ತಿರುವ ಈ ಸಂದರ್ಭದಲ್ಲಿ ಆರ್ಥಿಕತೆ ನೆಲ ಕಚ್ಚಿದೆ. ಇಂತಹ ಸಂದರ್ಭದಲ್ಲಿ ರೈತರು ಮತ್ತು ಕೃಷಿ ಅವಲಂಬಿತ ಕೃಷಿ ಪರಿವಾರ ಅಪಾರ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ರೈತರಿಗೆ ನೆರವಾಗಿ ನಿಲ್ಲುವ ಬದಲು, ರೈತರು ತಮ್ಮ ಕೃಷಿ ಭೂಮಿಯನ್ನು ಮಾರಿಕೊಂಡು ಗುಳೆಯೆದ್ದು ಹೋಗಲು ಸರಕಾರವೇ ಉತ್ತೇಜನ ನೀಡುತ್ತಿದೆ.  ಇದರಲ್ಲಿ ಕೈಗಾರಿಕೆಗಳು ಮತ್ತು ಕೃಷಿಯೇತರರೂ ಕೃಷಿಗೆ ಬರುವುದಕ್ಕಿಂತ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ವ್ಯಾಪಾರಸ್ಥರು, ಉದ್ಯಮಿಗಳು, ಈಗಾಗಲೇ ತಮ್ಮ ಕಪ್ಪು ಹಣದಿಂದ ತಮ್ಮ & ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ  ಹಾಗೂ ಬೇನಾಮಿ ಹೆಸರಿನಲ್ಲಿ, 1961 ಭೂ ಸುಧಾರಣಾ ಕಾಯ್ದೆ ನಿಯಮ ಉಲ್ಲಂಘನೆ ಮಾಡಿ, ಖರೀದಿಸಿರುವ ಅಕ್ರಮ ಜಮೀನುಗಳನ್ನು ಸಕ್ರಮ ಮಾಡಿಕೊಳ್ಳುವ  ಉದ್ದೇಶವೇ ಹೊರತು ಮತ್ತೇನೂ ಅಲ್ಲ. ಇದಲ್ಲದೇ, ಅಕ್ರಮ ಸಂಪತ್ತನ್ನು ಮಾಡಿ, ತೆರಿಗೆ ಹಣ ವಂಚಿಸಿದವರು, ಅದನ್ನು ಕೃಷಿ ಆದಾಯವೆಂದು ತೋರಿಸಿ, ಕಪ್ಪು ಹಣವನ್ನು ಬಿಳಿ ಮಾಡಿಕೊಳ್ಳಲು ಸರಕಾರವೇ ರಹದಾರಿ ನಿರ್ಮಿಸಿದೆ.  ಎಲ್ಲಾ ಪಕ್ಷಗಳಲ್ಲಿನ ರಿಯಲ್ ಎಸ್ಟೇಟ್ ಹಿತಾಸಕ್ತಿಗಳು ಈ ತಿದ್ದುಪಡಿಯಿಂದ ಲಾಭಪಡೆಯುತ್ತವೆ. ಆದ್ದರಿಂದ ವಿರೋಧ ಪಕ್ಷಗಳು ಈ ಬಗ್ಗೆ ಕೇವಲ ಸಾಂಕೇತಿಕ ವಿರೋಧ ವ್ಯಕ್ತಪಡಿಸುತ್ತಿವೆಯೇ ಹೊರತು ಪ್ರಭಲ ಹೋರಾಟ ಸಂಘಟಿಸುತ್ತಿಲ್ಲ.  ಹಿಂದೆ ಸಿದ್ದರಾಯಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೃಷಿ ಆದಾಯ ಮಿತಿಯನ್ನು ಹೆಚ್ಚಿಸಿತ್ತು. ಈಗಿನ ಸರಕಾರ ಎಲ್ಲಾ ಆದಾಯವನ್ನು ಕೃಷಿ ಆದಾಯವೆಂದು ತೋರಿಸಲು ದಾರಿಮಾಡಿಕೊಟ್ಟಿದೆ.  ಈ ತಿದ್ದುಪಡಿಯಿಂದ ಮುಂದೆ ಉಳ್ಳವರು & ಇಲ್ಲದವರ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ.ಊಳಿಗಮಾನ್ಯ/ ಜಹಾಂಗೀರ್/  ಜೋಡಿದಾರ್ ಪದ್ದತಿಗಳು ಪ್ರಾರಂಭವಾಗಿ ಸಾಮಾಜಿಕ ಅಸಮಾನತೆ ಉಂಟಾಗುತ್ತದೆ.ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲದಂತಾಗುತ್ತದೆ. ಸಮಾಜದಲ್ಲಿ  ಅಶಾಂತಿ ಉಂಟಾಗಿ ರಕ್ತಪಾತಗಳಾಗಬಹುದು. ಇದಲ್ಲದೇ, ಸಾಮಾಜಿಕ ಸಾಮರಸ್ಯ ಕದಡುವ ಸಾಧ್ಯತೆಗಳಿವೆ ಎಂದು ಸಂಘಟನೆ ಹೇಳಿದೆ.

ಭೂ-ಮಿತಿಯ ಸಡಿಲಿಕೆ:-  ಕೃಷಿಮಾಡುವವನಿಗೆ 54ಎಕರೆ ಸಾಲದೇ  5 ಜನರಿಗಿಂತ ಮೇಲಿದ್ದವರಿಗೆ 108 ಎಕರೆಗ ಈಗಾಗಲೇ ಅವಕಾಶ ಇತ್ತು.  ಗರಿಷ್ಠ 216 ಎಕರೆ ಹೊಂದ ಬಹುದಿತ್ತಲ್ಲ. ಇದನ್ನು ದುಪ್ಪಟ್ಟು ಮಾಡಿದ ಉದ್ದೇಶವೇನು? 

ಕೃಷಿ ಜಮೀನು ಕೃಷಿಗೆ:- ಕೃಷಿ ಜಮೀನು ಕೃಷಿಗೆ ಎಂಬ ನಿಯಮದ ಸಡಿಲಿಕೆಯ ಹಿಂದಿನ ಮರ್ಮವೇನು?  ಇದರಿಂದ ಕೃಷಿ ಜಮೀನು ಅನ್ಯ  ಉದ್ದೇಶಕ್ಕೆ ಬಳಕೆಯಾಗಿ ಆಹಾರದ ಉತ್ಪಾದನೆಯ ಮೇಲೆ ದುಷ್ಪರಿಣಾಮ ಬೀರುವುದಿಲ್ಲವೇ?  

ಪೂರ್ವಾನ್ವಯ:- ಈ ತಿದ್ದುಪಡಿಯಲ್ಲಿ 1974 ಮಾರ್ಚ್ 1ರಿಂದ ಯಾರ್ಯಾರು ಭೂ-ಸುಧಾರಣಾ ಕಾಯ್ದೆಯ ನಿಯಮಗಳು  ಉಲ್ಲಂಘನೆ ಮಾಡಿ ವಿವಿಧ ನ್ಯಾಯಾಲಯಗಳಲ್ಲಿ 83 ಸಾವಿರಕ್ಕೂ ಹೆಚ್ಚು   ಪ್ರಕರಣಗಳು ದಾಖಲಾಗಿವೆ ಅವುಗಳಲ್ಲಿ 12ಸಾವಿರಕ್ಕೂ ಹೆಚ್ಚು  ಪ್ರಕರಣಗಳು ಜಿಲ್ಲಾಧಿಕಾರಿಗಳ & ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಇವೆ. ಈ ಪ್ರಕರಣಗಳು ನಿಯಮ ಉಲ್ಲಂಘನೆ  ಆಗಿರುವುದರಿಂದ ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತು. ಅದನ್ನು ಬಿಟ್ಟು,  ಸರ್ಕಾರ ಪೂರ್ವಾನ್ವಯ ಆಗುವಂತೆ ತಿದ್ದುಪಡಿ ಮಾಡಿರುವುದರಿಂದ ಅಕ್ರಮ ದಂಧೆಗೆ ಕಾನೂನಿನ ಮಾನ್ಯತೆ ನೀಡಿದಂತಾಗಿದೆ. 

ಅನೇಕ ವರ್ಷಗಳಿಂದ ಅನುಭವಿಸಿ, ಅಭಿವೃದ್ಧಿಪಡಿಸಿ, ಕಾಪಾಡಿಕೊಂಡು ಬಂದಿರುವ ಕುಮ್ಕಿ, ಗೇರುಲೀಸ್, ಖಾನ-ಬಾಣೆ, ಸೊಪ್ಪಿನ ಬೆಟ್ಟ, ಮೊದಲಾದ ಭೂಮಿಗಳನ್ನು  ಮಂಜೂರು ಮಾಡುವಂತೆ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ, ಅದರ ಬಗ್ಗೆ ಆಸಕ್ತಿ ತೋರದೇ, ಬಡವರಿಗೆ ಹಂಚಲು ಭೂಮಿಯ ಕೊರತೆಯಿದೆ ಎಂದು ಹೇಳುತ್ತಿರುವ ಸರ್ಕಾರ ಈಗ ಕೇವಲ ಬಂಡವಾಳ ಶಾಹಿಗಳ ಪರ ನಿಂತು ಅವರು ಎಲ್ಲಾ ಅಕ್ರಮಗಳಿಗೆ ಹಸಿರು ನಿಶಾನೆ ತೋರಲು ಮುಂದಾಗಿರುವುದು ಎಷ್ಟು ಸರಿ?

 ಈ ಬಗ್ಗೆ ಭಾರತೀಯ ಕಿಸಾನ್ ಸಂಘ ಹಾಗೂ ಸಮಾನ ಹಿತಾಸಕ್ತಿಯ ಸಂಘಟನೆಗಳ ಪ್ರತಿನಿಧಿಗಳು ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ತಮ್ಮ ಅಹವಾಲು ಸಲ್ಲಿಸಿ, ಮನವರಿಕೆ ಮಾಡಿಕೊಟ್ಟರೂ, ಸರಕಾರ ಯತಾವತ್ತಾಗಿ ಮಸೂದೆಯನ್ನು ಜಾರಿಗೆ ತಂದಿದೆ ಎಂದರೆ, ಸರಕಾರ ಅಕ್ರಮದಾರ ಮತ್ತು  ಭ್ರಷ್ಟರ ಜೊತೆಗೆ ಇದೆಯೆಂಬುದು ಸ್ಪಷ್ಟ. ಇಂತಹ ತಿದ್ದುಪಡಿಗಳಿಂದ   ಸಮಾಜಕ್ಕೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಅವಶ್ಯಕತೆ ಏನಿದೆ ಎಂದೆನಿಸುತ್ತದೆ. ಈ ಸರಕಾರಗಳು ಬಲಾಡ್ಯರನ್ನು ದಂಡಿಸುವುದಿರಲಿ ಕಣ್ಣೆತ್ತಿ ನೋಡಲೂ ಹೆದರುತ್ತದೆ.  ಆದ್ದರಿಂದ  ಇಂತಹ ರೈತವಿರೋಧಿ ಸಮಾಜ ವಿರೋಧಿ  ಸರ್ಕಾರದ ಈ ಜನವಿರೋಧಿ ಕ್ರಮದ ವಿರುದ್ಧ  ರಾಜ್ಯದಾದ್ಯಂತ ಹೋರಾಟ ನೆಡೆಸಲು ಹಾಗೂ ರೈತ ವಿರೋಧಿ ತೀರ್ಮಾನವನ್ನು ಹಿಂತೆಗೆಯುವಂತೆ ಮಾಡಲು  ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ (ರಿ)ಪ್ರಕಟಣೆಯಲ್ಲಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X