ತಿರುವನಂತಪುರಂನಲ್ಲಿ ಕೊರೋನ ಸಾಮುದಾಯಿಕವಾಗಿ ಹರಡುತ್ತಿದೆ: ದೃಢಪಡಿಸಿದ ಪಿಣರಾಯಿ ವಿಜಯನ್

ಕೊಚ್ಚಿ: ತಿರುವನಂತಪುರಂನ ಎರಡು ಗ್ರಾಮಗಳಾದ ಪುಲ್ಲುವಿಳಾ ಮತ್ತು ಪೂಂತುರಾದಲ್ಲಿ ಕೊರೋನ ಸಾಮುದಾಯಿಕವಾಗಿ ಹರಡುತ್ತಿದೆ ಎಂದು ಸಿಎಂ ಪಿಣರಾಯಿ ವಿಜಯನ್ ದೃಢಪಡಿಸಿದ್ದಾರೆ.
ತಿರುವನಂತಪುರಂನಲ್ಲಿ ಪರಿಸ್ಥಿತಿ ಗಂಭೀರವಾಗಿದೆ . ಕರಾವಳಿ ಪ್ರದೇಶಗಳಲ್ಲಿ ಸೋಂಕಿ ಹರಡುತ್ತಿದೆ ಎಂದವರು ಹೇಳಿದರು. ಪುಲ್ಲುವಿಳಾದಲ್ಲಿ ಶುಕ್ರವಾರ 97 ಜನರನ್ನು ಪರೀಕ್ಷಿಸಲಾಗಿದ್ದು, 51 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪೂಂತುರಾದಲ್ಲಿ 50ರಲ್ಲಿ 26 ಮಂದಿಯಲ್ಲಿ ಕೊರೋನ ದೃಢಪಟ್ಟಿದೆ ಎಂದವರು ಹೇಳಿದರು.
Next Story





