ಕಾಪು: ಇಬ್ಬರು ಪೊಲೀಸ್ ಸಹಿತ 10 ಮಂದಿಗೆ ಕೊರೋನ ಪಾಸಿಟಿವ್
ಉಡುಪಿ/ಪಡುಬಿದ್ರಿ, ಜು.17: ಇಬ್ಬರು ಪೊಲೀಸರ ಸಹಿತ ಶುಕ್ರವಾರ ಕಾಪು ಕಾಪು ತಾಲೂಕಿನಲ್ಲಿ ವಿವಿಧೆಡೆ ಹತ್ತು ಮಂದಿಯಲ್ಲಿ ಕೊರೊನಾ ಸೋಂಕು ಧೃಡವಾಗಿದೆ. ಕಾಪು ಪೊಲೀಸ್ ಠಾಣೆಯ 49 ಮತ್ತು 46 ವರ್ಷ ಪ್ರಾಯದ ಪುರುಷ ಸಿಬಂದಿಗಳಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ.
ಇನ್ನುಳಿದಂತೆ ಕುರ್ಕಾಲು ಗಿರಿನಗರದ 40, 35 ವರ್ಷದ ಇಬ್ಬರು ಪುರುಷರು, 3 ವರ್ಷ ಪ್ರಾಯದ ಹುಡುಗ, ಮೂಳೂರಿನ 64 ವರ್ಷದ ಮಹಿಳೆ, ಕಟಪಾಡಿಯ 83 ವರ್ಷದ ಮಹಿಳೆ, ಕಾಪು ಪಡುಗ್ರಾಮದ 47 ವರ್ಷದ ಪುರುಷ, ಎಲ್ಲೂರು ಬೆಳ್ಳಿಬೆಟ್ಟಿನ 60 ವರ್ಷದ ಪುರುಷ ಮತ್ತು ಪಡುಬಿದ್ರಿ ನಡ್ಸಾಲಿನ 50 ವರ್ಷದ ಪುರುಷಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಕೊರೋನ ಪಾಸಿಟಿವ್ ಪ್ರಕರಣಗಳ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಪಾಸಿಟಿವ್ ಕೇಸ್‌ಗಳು ಕಂಡು ಬಂದಿದ್ದವರ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಪ್ರಕರಣಗಳೆಲ್ಲವೂ ಸ್ಥಳೀಯ ಸಂಪರ್ಕದ ಪ್ರಕರಣಗಳಾಗಿವೆ. ಸುತ್ತಲಿನ ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಮತ್ತು ತಾಲೂಕು ಆಳಿತವು ಸಾರ್ವಜನಿಕರಲ್ಲಿ ವಿನಂತಿಸಿದೆ.
ಕುಂದಾಪುರದಲ್ಲಿ 21: ಕುಂದಾಪುರ ತಾಲೂಕಿನಲ್ಲಿ ಇಂದು ಒಟ್ಟು 21 ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಯಡಾಡಿ ಮತ್ಯಾಡಿಯಲ್ಲಿ 4, ಕಾವ್ರಾಡಿಯಲ್ಲಿ 3, ಗಂಗೊಳ್ಳಿಯಲ್ಲಿ 3, ಮೊಳಹಳ್ಳಿಯಲ್ಲಿ 2, ಕರ್ಕುಂಜೆಯಲ್ಲಿ 2, ಬಳ್ಕೂರಿನಲ್ಲಿ 2, ವಂಡ್ಸೆಯಲ್ಲಿ 2, ಶಂಕರನಾರಾಯಣ, ತ್ರಾಸಿ ಹಾಗೂ ಗಂಗೊಳ್ಳಿಯಲ್ಲಿ ತಲಾ ಒಬ್ಬರಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಬೈಂದೂರು 4: ಬೈಂದೂರು ತಾಲೂಕಿನಲ್ಲಿ ಒಟ್ಟು ನಾಲ್ವರಲ್ಲಿ ಕೊರೋನ ಪಾಸಿಟಿವ್ ಕಂಡುಬಂದಿದೆ. ಪಡುವರಿಯ ಒಬ್ಬರಲ್ಲಿ ಹಾಗೂ ಉಪ್ಪುಂದದ ಒಂದೇ ಕುಟುಂಬದ ಮೂವರು ಕೋವಿಡ್‌ಗೆ ಪಾಸಿಟಿವ್ ಆಗಿದ್ದು, ಎಲ್ಲರೂ ಮುಂಬಿಯಿಯಿಂದ ಬಂದು ಪಾಸಿಟಿವ್ ಆದವರ ಪ್ರಾಥಮಿಕ ಸಂಪರ್ಕಿತರು ಎಂದು ಬೈಂದೂರು ತಹಶೀಲ್ದಾರ್ ತಿಳಿಸಿದ್ದಾರೆ.
ಬ್ರಹ್ಮಾವರದಲ್ಲಿ ಐವರು: ತಾಲೂಕಿನ ಚಾಂತಾರು ಗ್ರಾಮದ 33ರ ಹರೆಯದ ಪುರುಷ, ಆರೂರು ಅರ್ಜೆಯ 45ರ ಪುರುಷ, ಮಣೂರು ಕಂಬಳಗದ್ದೆಯ 26ರ ವ್ಯಕ್ತಿ, ಕೋಟತಟ್ಟು ಪಡುಕೆರೆಯ 38ರ ವ್ಯಕ್ತಿ ಹಾಗೂ ಹಂದಟ್ಟುವಿನ 32ರ ಹರೆಯದ ವ್ಯಕ್ತಿಯಲ್ಲಿ ಪಾಸಿಟಿವ್ ಕಂಡುಬಂದಿದೆ.
ಕೋಟ ಹೋಬಳಿಯ ಸಾಲಿಗ್ರಾಮ ಕಾರ್ಕಡದ 48ರ ಹರೆಯದ ಜವುಳಿ ಅಂಗಡಿಯ ವ್ಯಕ್ತಿ ಕೊರೋನಕ್ಕೆ ಪಾಸಿಟಿವ್ ಆಗಿದ್ದು, ಅವರು ಮಣಿಪಾಲ ಆಸ್ಪತ್ರೆಗೆ ಭೇಟಿದಾಗ ಸೋಂಕು ತಗಲಿರಬೇಕೆಂದು ಸಂಶಯಿಸಲಾಗಿದೆ. ಅಲ್ಲದೇ ಬಾರಕೂರು ಹೊಸಾಳದ ಬಾಲಕನೋರ್ವನಲ್ಲೂ ಪಾಸಿಟಿವ್ ಕಂಡುಬಂದಿದೆ.







