Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ನನ್ನನ್ನು ಯಾಕೆ ಅವಮಾನಿಸಲಾಗುತ್ತಿದೆ:...

ನನ್ನನ್ನು ಯಾಕೆ ಅವಮಾನಿಸಲಾಗುತ್ತಿದೆ: ಸರಕಾರಕ್ಕೆ ದ್ಯುತಿ ಚಂದ್ ಪ್ರಶ್ನೆ

ತರಬೇತಿಗೆ ನೀಡಿದ ಹಣದ ವಿವರವನ್ನು ಬಹಿರಂಗಪಡಿಸಿದ ವಿವಾದ

ವಾರ್ತಾಭಾರತಿವಾರ್ತಾಭಾರತಿ18 July 2020 12:19 PM IST
share
ನನ್ನನ್ನು ಯಾಕೆ ಅವಮಾನಿಸಲಾಗುತ್ತಿದೆ: ಸರಕಾರಕ್ಕೆ ದ್ಯುತಿ ಚಂದ್ ಪ್ರಶ್ನೆ

ಹೊಸದಿಲ್ಲಿ: ಅಥ್ಲೀಟ್ ದ್ಯುತಿ ಚಂದ್ ತಮಗೆ ಬಹುಮಾನವಾಗಿ ದೊರೆತ ಬಿಎಂಡಬ್ಲು ಕಾರನ್ನು ಫೇಸ್‌ಬುಕ್‌ನಲ್ಲಿ ಮಾರಾಟ ಮಾಡುವ ನಿರ್ಧಾರ ವ್ಯಕ್ತಪಡಿಸಿದ ಬೆನ್ನಲ್ಲೇ ಒಡಿಶಾ ಸರಕಾರವು ಅವರಿಗೆ ಈ ವರೆಗೆ ತರಬೇತಿಗೆೆ ನೀಡಿದ ಹಣದ ವಿವರಗಳನ್ನು ಬಹಿರಂಗಪಡಿಸಿದೆ.

 ಇದಕ್ಕೆ ಪ್ರತಿಕ್ರಿಯೆ ನೀಡಿರುವ ದ್ಯುತಿ ಚಂದ್ ‘‘ ನನ್ನನ್ನು ಸೇರಿದಂತೆ ಅನೇಕ ಕ್ರೀಡಾಪಟುಗಳನ್ನು ಒಡಿಶಾ ಸರಕಾರ ಬೆಂಬಲಿಸಿದೆ. ಶ್ರಬಾನಿ ನಂದಾ, ಅಮಿಯಾ ಮಲ್ಲಿಕ್, ಪೂರ್ಣಿಮಾ ಹೆಂಬ್ರಾಮ್ ಮತ್ತು ಕೆಲವು ಹಾಕಿ ಕ್ರೀಡಾಪಟುಗಳು ಸರಕಾರದಿಂದ ನೆರವು ಪಡೆದಿದ್ದಾರೆ. ಅವರ ವಿವರಗಳನ್ನು ಎಂದಿಗೂ ಬಹಿರಂಗಪಡಿಸಲಾಗಿಲ್ಲ, ಆದರೆ ನೇರವಾಗಿ ನನ್ನ ವಿವರವನ್ನು ಮಾತ್ರ ಬಹಿರಂಗಪಡಿಸಲಾಗಿದೆ. ನನ್ನನ್ನು ಯಾಕೆ ಅವಮಾನಿಸಲಾಗುತ್ತಿದೆ ’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದು ಬಹುಮಾನದ ಹಣ: ‘‘ಈ ಎಲ್ಲಾ ವರ್ಷಗಳಲ್ಲಿ ನನಗೆ ಬೆಂಬಲ ನೀಡಿದ್ದಕ್ಕಾಗಿ ನಾನು ಒಡಿಶಾ ಸರಕಾರಕ್ಕೆ ಋಣಿಯಾಗಿದ್ದೇನೆ, ಆದರೆ ಈ 4 ಕೋಟಿ ರೂ. ಸರಿಯಾದ ಚಿತ್ರವನ್ನು ತೋರಿಸುವುದಿಲ್ಲ. 3 ಕೋಟಿ ರೂ. ಎರಡು ಬೆಳ್ಳಿ ಪದಕಗಳನ್ನು ಗೆದ್ದ ಬಹುಮಾನದ ಮೊತ್ತವಾಗಿದೆ. ಇದನ್ನು ತರಬೇತಿಗೆ ಆರ್ಥಿಕ ನೆರವು ಎಂದು ಪರಿಗಣಿಸಬಾರದು.’’ ಎಂದರು.

ಕೆಐಐಟಿ ಸಂಸ್ಥಾಪಕ ಮತ್ತು ಸಂಸತ್ ಸದಸ್ಯ ಅಚ್ಯುತ ಸಮಂತಾ ಅವರು ತಮ್ಮ ತರಬೇತಿಗೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದರಿಂದ ಇನ್ನು ಮುಂದೆ ತಮ್ಮ ಕಾರನ್ನು ಮಾರಾಟ ಮಾಡುತ್ತಿಲ್ಲ ಎಂದು ಅವರು ಹೇಳಿದರು.ಚ್ಟ ‘‘ನನಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಸಹ ಹಣಕಾಸಿನ ನೆರವು ನೀಡಿದ್ದಾರೆ. ಅಗತ್ಯವಿದ್ದಾಗ ನಾನು ಅವರನ್ನು ಸಂಪರ್ಕಿಸುತ್ತೇನೆ ’’ ಎಂದು ಹೇಳಿರುವುದಾಗಿ ದ್ಯುತಿ ಮಾಹಿತಿ ನೀಡಿದರು.

‘‘ನಾನು ಈಗ ನಿರಾಶೆಗೊಂಡಿದ್ದೇನೆ, ಏಕೆಂದರೆ ಜಗತ್ತಿನಲ್ಲಿ ಅಥವಾ ಭಾರತದಲ್ಲಿ ಕ್ರೀಡಾಪಟುವಿನ ತರಬೇತಿಗೆ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ ಎಂದು ಯಾವುದೇ ಸರಕಾರ ಮಾಧ್ಯಮಗಳಿಗೆ ಬಹಿರಂಗಪಡಿಸಿಲ್ಲ. ಹಿಮಾ ದಾಸ್, ನೀರಜ್ ಚೋಪ್ರಾ, ಅಭಿನವ್ ಬಿಂದ್ರಾ ಅಥವಾ ಪಿ.ವಿ. ಸಿಂಧು ಅವರ ತರಬೇತಿಗೆ ನೀಡಿರುವ ಹಣದ ಬಗ್ಗೆ ಸರಕಾರ ಬಹಿರಂಗ ಪಡಿಸಿದೆಯೋ?’’ಎಂದು ಪ್ರಶ್ನಿಸಿದ್ದಾರೆ. ಚ್ಟ ತನ್ನ ಬಿಎಂಡಬ್ಲು ಕಾರನ್ನು ಮಾರಾಟ ಮಾಡಲು ಯತ್ನಿಸಿದ ಪ್ರಕರಣ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಅವರು ತನ್ನ ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ನ್ನು ಅಳಿಸಿ ಹಾಕಿದರು. ಇದು ದ್ಯುತಿ ಅವರ ವೃತ್ತಿಜೀವನದ ವಿವಾದದ ಸಾಲಿಗೆ ಸೇರ್ಪಡೆಗೊಂಡಿತು. ಭಾರತದ ಖ್ಯಾತ ಓಟಗಾರ್ತಿ ಈ ಪೋಸ್ಟ್ ತನ್ನ ವೈಯಕ್ತಿಕ ಬದುಕಿನ ಭಾಗವಾಗಿರುವುದರಿಂದ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.ಚ್ಟ ದ್ಯುತಿ ಅವರ ಹೇಳಿಕೆ ಪ್ರಕಾರ ನಕಾರಾತ್ಮಕತೆಯನ್ನು ಹರಡಲು ಮತ್ತು ವಿವಾದವನ್ನು ಸೃಷ್ಟಿಸುವ ಸಲುವಾಗಿ ಅವರು ಹಾಕಿದ ಫೇಸ್ ಬುಕ್ ಪೋಸ್ಟ್‌ನ್ನು ತಪ್ಪಾಗಿ ಅರ್ಥೈಸಲಾಗಿದೆ.ಚ್ಟ ‘‘ನನ್ನ ಬಿಎಂಡಬ್ಲು ಕಾರನ್ನು ಫೇಸ್‌ಬುಕ್‌ನಲ್ಲಿ ಮಾರಾಟ ಮಾಡುವ ಬಗ್ಗೆ ನಾನು ಪೋಸ್ಟ್ ಮಾಡಿದಾಗ, ನನ್ನ ತರಬೇತಿಗೆ ಧನಸಹಾಯ ಮಾಡಲು ನನಗೆ ಹಣ ಬೇಕು ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ ... ಆ ಪೋಸ್ಟ್ ನ್ನು ಆ ರಾತ್ರಿ 10 ಗಂಟೆಯವರೆಗೆ ಇಟ್ಟುಕೊಂಡಿದ್ದೆ. ಆದರೆ ಮತ್ತೆ ಅದನ್ನು ನೋಡಿದಾಗ ಅದನ್ನು ತಪ್ಪಾಗಿ ಅರ್ಥೈಸಲ್ಪಟ್ಟಿದೆ ಮತ್ತು ವಿವಾದಕ್ಕೆ ಕಾರಣವಾಗಿದೆ ಎಂದು ಗೊತ್ತಾಯಿತು. ಈ ಕಾರಣಕ್ಕಾಗಿ ನಾನು ಆ ಪೋಸ್ಟ್‌ನ್ನು ಅಳಿಸಿ ಹಾಕಿದೆ ’’ಎಂದು 24 ವರ್ಷದ ಟ್ರ್ಯಾಕ್ ಅಥ್ಲೀಟ್ ತಿಳಿಸಿದ್ದಾರೆ.

 2018ರಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 100ಮೀ., 200 ಮೀ. ಸ್ಪರ್ಧೆಗಳಲ್ಲಿ ದ್ಯುತಿ ಬೆಳ್ಳಿ ಪದಕಗಳನ್ನು ಗೆದ್ದರು. ಅನಂತರ ಒಡಿಶಾ ಸರಕಾರ ಅವರಿಗೆ 3 ಕೋಟಿ ರೂ. ಬಹುಮಾನ ನೀಡಿತ್ತು. ರಾಜ್ಯ ಸರಕಾರದ ಕ್ರೀಡಾ ಮತ್ತು ಯುವಜನ ಸೇವೆಗಳ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ದ್ಯುತಿಗೆ 3 ಕೋಟಿ ರೂ.ಬಹುಮಾನ ಸೇರಿದಂತೆ 2015ರ ಬಳಿಕ ಈ ವರೆಗೆ ಒಟ್ಟು 4.09 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X