ಕೆಪಿಟಿಸಿಎಲ್ ರಾಜ್ಯ ನೌಕರರ ಸಂಘದ ಚುನಾವಣೆ: ಮೆಸ್ಕಾಂ ವ್ಯಾಪ್ತಿಯಿಂದ 20 ಮಂದಿ ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆ

ಮಂಗಳೂರು, ಜು.18: ಬೆಂಗಳೂರಿನಲ್ಲಿ ನಡೆಯಲಿರುವ ಕೆಪಿಟಿಸಿಎಲ್ ರಾಜ್ಯ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು,ಸದಸ್ಯರು ಮತ್ತು ಮೆಸ್ಕಾಂ ವ್ಯಾಪ್ತಿಯ ಉಪಾಧ್ಯಕ್ಷರ ನೇಮಕಕ್ಕೆ ಪ್ರಾಥಮಿಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದೆ.
21ನೆ ತ್ರೈವಾರ್ಷಿಕ ಮಹಾಧಿವೇಶನಕ್ಕೆ ದ.ಕ.ಜಿಲ್ಲೆಯಿಂದ ಪ್ರಾಥಮಿಕ ಪ್ರತಿನಿಧಿಗಳಾಗಿ ಇತ್ತೀಚೆಗೆ ನಗರದಲ್ಲಿ ನಡೆದ ಚುನಾವಣೆಯಲ್ಲಿ ಕೆಪಿಟಿಸಿಎಲ್ ರಾಜ್ಯ ನೌಕರರ ಸಂಘದ ಅಧ್ಯಕ್ಷ ಟಿ.ಆರ್.ರಾಮಕೃಷ್ಣಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಬಲರಾಮ್ ಇವರ ತಂಡದಿಂದ ಚುನಾಯಿತರಾದ ಅಭ್ಯರ್ಥಿಗಳ ವಿವರ ಹೀಗಿವೆ.
ಮಂಗಳೂರು ಒಂದು ಮತ್ತು ಎರಡು ವಿಭಾಗದಲ್ಲಿ ಎಚ್. ಗುರುಮೂರ್ತಿಯ ನೇತೃತ್ವದ ತಂಡದಲ್ಲಿ ಷಣ್ಮುಖಬಾವಿ,ಸಿ.ಬಿ.ಶಿವಣ್ಣ, ರಿಝ್ವನ್ ಅಹ್ಮದ್, ವಸಂತ ಕುಮಾರ್, ಗಿರಿಶ್, ಮಹಾದೇವ, ಭಾಸ್ಕರ, ದಯಾನಂದ, ಲೋಹಿತ್ ಮತ್ತು ಬಂಟ್ವಾಳ ವಿಭಾಗದಲ್ಲಿ ಶಂಕರ್ ಪ್ರಕಾಶ್‌ರ ನೇತೃತ್ವದ ತಂಡದಲ್ಲಿ ಸಿದ್ಧರಾಜು, ಶರಣಪ್ಪ, ಪದ್ಮನಾಭ ಗೌಡ, ರಾಜ್‌ಕುಮಾರ್, ಕೃಷ್ಣೆ ಗೌಡ, ಹಾಗೂ ಪುತ್ತೂರು ವಿಭಾಗದಲ್ಲಿ ಸುಂದರ್‌ರ ನೇತೃತ್ವದ ತಂಡದಲ್ಲಿ ಪುತ್ತು, ಅರುಣ್ ಶೆಟ್ಟಿ, ವಸಂತ ಕುಮಾರ್ ಟಿ.ಎಂ., ಕುಮಾರಸ್ವಾಮಿ ಸಹಿತ ದ.ಕ. ಜಿಲ್ಲೆಯಿಂದ 20 ಅಭ್ಯರ್ಥಿಗಳು ಅಯ್ಕೆಯಾಗಿದ್ದಾರೆ.







