ಯು.ಪಿ.ಉಪಾಧ್ಯಾಯ ನಿಧನಕ್ಕೆ ಕಸಾಪ ಸಂತಾಪ
ಕಾಪು, ಜು.18: ಭಾಷಾ ವಿಜ್ಞಾನಿ, ಜಾನಪದ ವಿದ್ವಾಂಸ, ಡಾ.ಯು.ಪಿ. ಉಪಾಧ್ಯಾಯ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಮತ್ತು ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿತ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿರುವ ಇವರ ಅಗಲುವಿಕೆಯಿಂದ ಬಹುಭಾಷಾ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಡಾ.ಪ್ರಭಾಕರ ಜೋಶಿ: ಹಿರಿಯ ಭಾಷಾ ಪಂಡಿತ ಡಾ.ಯು.ಪಿ.ಉಪಾ ಧ್ಯಾಯರು ಜಗತ್ತಿನ ಅಗ್ರಗಣ್ಯ ಭಾಷಾ ವಿಜ್ಞಾನಿಯಾಗಿದ್ದರು. ದಿ.ಸುಶೀಲಾ ಉಪಾಧ್ಯಾಯ ಹಾಗೂ ಯು.ಪಿ.ಉಪಾಧ್ಯಾಯ ಸಂಶೋಧಕ ಋಷಿ ದಂಪತಿ ಯಾಗಿ ಬದುಕಿದವರು. ಅಗಾಧ ಪಾಂಡಿತ್ಯ, ಪರಿಶ್ರಮ, ಅತ್ಯಂತ ಸರಳ ವ್ಯಕ್ತಿತ್ವದ ಭಾಷಾ ಮಹರ್ಷಿಗೆ ನಮನ ಎಂದು ಹಿರಿಯ ವಿದ್ವಾಂಸ ಡಾ.ಪ್ರಭಾ ಕರ ಜೋಶಿ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story





