ರೈಲು ಖಾಸಗೀಕರಣದ ವಿರುದ್ದ ಕುಂದಾಪುರದಲ್ಲಿ ಪ್ರತಿಭಟನೆ

ಕುಂದಾಪುರ, ಜು.18: ರೈಲು ಖಾಸಗೀಕರಣ ಕೇಂದ್ರ ಸರಕಾರದ ಭ್ರಷ್ಟಾ ಚಾರದ ಮತ್ತೊಂದು ಮುಖವಾಗಿದೆ. ಖಾಸಗೀಕರಣದಿಂದ ನಿರುದ್ಯೋಗ ಮತ್ತಷ್ಟು ಉಲ್ಬಣಗೊಳ್ಳಲಿದೆ. ಆರ್ಥಿಕ ಸಂಕಷ್ಟ ಹೆಚ್ಚಾಗಲಿದ್ದು ಸರಕಾರಕ್ಕೆ ಬೃಹತ್ ಪ್ರಮಾಣದ ಆದಾಯಕ್ಕೆ ಕುತ್ತು ಬರಲಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಹೇಳಿದ್ದಾರೆ.
ಸಿಐಟಿಯು ಕುಂದಾಪುರ ತಾಲೂಕು ಸಮಿತಿಯ ನೇತೃತ್ವದಲ್ಲಿ ಕುಂದಾಪುರದ ರೈಲು ನಿಲ್ದಾಣದದಲ್ಲಿ ಶುಕ್ರವಾರ ನಡೆದ ರೈಲು ಖಾಸಗೀಕರಣದ ವಿರುದ್ಧ ಧರಣಿಯಲ್ಲಿ ಅವರು ಮಾತನಾಡುತಿದ್ದರು.
ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ ಮಾತನಾಡಿದರು. ಬಳಿಕ ಸ್ಟೇಷನ್ ಮಾಸ್ಟರ್ ಪ್ರಶಾಂತ್ ಶೆಟ್ಟಿ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಧರಣಿಯಲ್ಲಿ ಮುಖಂಡರಾದ ಸುರೇಶ್ ಕಲ್ಲಾಗರ, ಮಹಾಬಲ ವಡೇರ ಹೋಬಳಿ, ಬಲ್ಕೀಸ್ ಉಪಸ್ಥಿತರಿದ್ದರು.
Next Story





